ಸಿನಿಮಾ ಸುದ್ದಿ

2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘವೇಂದ್ರ ರಾಜ್ ಕುಮಾರ್ ಅತ್ಯುತ್ತಮ ನಟ

Srinivasamurthy VN

ಬೆಂಗಳೂರು: 2018ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಮತ್ತು ಮಘನಾ ರಾಜ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದೆ.

'ಅಮ್ಮನೆ ಮನೆ' ಸಿನಿಮಾದ ನಟನೆಗಾಗಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿದ್ದು, ಇರುವುದೆಲ್ಲವ ಬಿಟ್ಟು ಚಿತ್ರದ ಅಮೋಘ ನಟನೆಗಾಗಿ ಮೇಘನಾ ರಾಜ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಉಳಿದಂತೆ ದಯಾಳ್ ಪದ್ಮನಾಭನ್ ನಿರ್ದೇಶನ 'ಆ ಕರಾಳ ರಾತ್ರಿ' ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದ್ದು, ಜೀವಮಾನ ಸಾಧನೆಗಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ ಎಸ್ ಬಸವರಾಜು ಅವರಿಗೆ ವಿಷ್ಣುವರ್ಧನ ಪ್ರಶಸ್ತಿ ಘೋಷಣೆಯಾಗಿದೆ.

2018ನೇ ವರ್ಷದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ
ಮೊದಲ ಅತ್ಯುತ್ತಮ ಚಿತ್ರ - ಕರಾಳ ಚಿತ್ರ 
ಉತ್ತಮ ನಟ - ರಾಘವೇಂದ್ರ ರಾಜಕುಮಾರ್, ಸಿನಿಮಾ ಅಮ್ಮನ ಮನೆ 
ಎರಡನೇ ಅತ್ಯುತ್ತಮ ಚಿತ್ರ - ರಾಮನ ಸವಾರಿ 
ಮೂರನೇ ಅತ್ಯುತ್ತಮ ಚಿತ್ರ - ಒಂದಲ್ಲಾ ಎರಡಲ್ಲ 
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಸಂತಕವಿ ಕನಕದಾಸರ ರಾಮಧಾನ್ಯ 
ಅತ್ಯುತ್ತಮ ಮನರಂಜನಾ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು 
ಅತ್ಯುತ್ತಮ ಮಕ್ಕಳ ಚಿತ್ರ - ಹೂವು ಬಳ್ಳಿ 
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ - ಬೆಳಕಿನ ಕನ್ನಡಿ 
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ - ದೇಯಿ ಬೈದೇತಿ 
ಅತ್ಯುತ್ತಮ ನಟಿ - ಮೇಘನಾ ರಾಜ್ ( ಇರುವುದೆಲ್ಲವ ಬಿಟ್ಟು) 
ಅತ್ಯುತ್ತಮ ಪೋಷಕ ನಟ - ಬಾಲಾಜಿ ಮನೋಹರ್ ( ಚೂರಿಕಟ್ಟೆ) 
ಅತ್ಯುತ್ತಮ ಕತೆ - ಹರೀಶ್ ಎಸ್ ಚಿತ್ರ - ನಾಯಿಗೆರೆ 
ಅತ್ಯುತ್ತಮ ಚಿತ್ರಕತೆ - ಪಿ. ಶೇಷಾದ್ರಿ ( ಮೂಕಜ್ಜಿಯ ಕನಸುಗಳು) 
ಅತ್ಯುತ್ತಮ ಸಂಭಾಷಣೆ - ಶಿರಿಷಾ ಜೋಷಿ ಚಿತ್ರ ಸಾವಿತ್ರಿಬಾಯಿ ಪುಲೆ 
ಅತ್ಯುತ್ತಮ ಕಲಾ ನಿರ್ದೇಶನ - ಶಿವಕುಮಾರ್ ಜೆ, (ಕೆ ಜಿಎಫ್) 
ಹಿನ್ನಲೆ ಗಾಯಕ - ಸಿದ್ಧಾರ್ಥ ಬೆಳ್ಮಣ್ಣು 
ಅತ್ಯುತ್ತಮ ಬಾಲ ನಟ - ಮಾಸ್ಟರ್ ಅರ್ಯನ್ 
ಅತ್ಯುತ್ತಮ ಬಾಲ ನಟಿ - ಬೇಬಿ ಸಿಂಚನ 
ಅತ್ಯುತ್ತಮ ಕಲಾ ನಿರ್ದೆಶನ - ಶಿವಕುಮಾರ್ ಜೆ 
ಅತ್ಯುತ್ತಮ ಗೀತ ರಚನೆ - ಬರಗೂರು ರಾಮಚಂದ್ರಪ್ಪ 
ಅತ್ಯುತ್ತಮ ಹಿನ್ನಲೆ ಗಾಯಕಿ - ಕಲಾವತಿ ದಯಾನಂದ 
ಸಂಗೀತ ನಿರ್ದೇಶನ - ರವಿ ಬಸ್ರೂರ್ 
ಹಿರಿಯ ನಟ ಶ್ರೀನಿವಾಸ ಮೂರ್ತಿ - ಡಾ ರಾಜ್ ಕುಮಾರ್ 
ಪಿ. ಶೇಷಾದ್ರಿ-ಪುಟ್ಟಣ್ಣ ಕಣಗಾಲ್ ಪ್ರಶಸ್ತಿ 
ಬಿ ಎಸ್ ಬಸವರಾಜು - ವಿಷ್ಣುವರ್ಧನ ಪ್ರಶಸ್ತಿ

SCROLL FOR NEXT