ರತನ್ ಜೊತೆ ದರ್ಶನ್ 
ಸಿನಿಮಾ ಸುದ್ದಿ

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಾಲಕನ ಆಸೆ ಈಡೇರಿಸಿದ 'ಡಿ'ಬಾಸ್ 

ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ, ಒಡೆಯ, ಬಾಕ್ಸ್ ಆಫೀಸ್ ಸುಲ್ತಾನ, 'ಡಿ'ಬಾಸ್  ದರ್ಶನ್  ಅವರ ಮಾನವೀಯ ಮುಖ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ

ಬೆಂಗಳೂರು: ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ, ಒಡೆಯ, ಬಾಕ್ಸ್ ಆಫೀಸ್ ಸುಲ್ತಾನ, 'ಡಿ'ಬಾಸ್  ದರ್ಶನ್  ಅವರ ಮಾನವೀಯ ಮುಖ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ

ನೋಡಲು ಒರಟು ಒರಟಾಗಿ ಕಂಡರೂ ಅವರಲ್ಲಿನ ಮಗುವಿನಂತ ಮನಸ್ಸು, ಸಹಾಯ ಮಾಡುವ ಗುಣದಿಂದಾಗಿ ರಾಜ್ಯಾದ್ಯಂತ ಕೋಟ್ಯಂತರ ಅಭಿಮಾನಿ ವರ್ಗವನ್ನು ಪಡೆದುಕೊಂಡಿರುವ ದರ್ಶನ್  ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ.  ಯುವಕ, ಯುವತಿಯರಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರೂ ಪ್ರೀತಿಸುತ್ತಾರೆ. 

ಇಂತಹ ಮನೋಭಾವದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪುಟ್ಟ ಅಭಿಮಾನಿಯ ಆಸೆಯೊಂದನ್ನು ಈಡೇರಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವರ ಪುಟ್ಟ ಅಭಿಮಾನಿ ರತನ್ ನನ್ನು ಭೇಟಿ ಮಾಡುವ ಮೂಲಕ ಆತನ ಬಹುದಿನದ ಆಸೆಯೊಂದನ್ನು ಈಡೇರಿಸಿದ್ದಾರೆ. 

ರತನ್ ಗೆ ದರ್ಶನ್ ಎಂದರೇ ಅಚ್ಚುಮೆಚ್ಚು. ದರ್ಶನ್ ಸಿನಿಮಾ ಬಂದರೆ ಅವುಗಳನ್ನು ನೋಡದೆ ಇರುತ್ತಿರಲಿಲ್ಲ. ರತನ್ ತಂದೆಯ ಆಟೋ ಮೇಲೂ ದರ್ಶನ್ ಅವರ ಭಾವಚಿತ್ರವನ್ನು ಹಾಕಿಸಿದ್ದಾರೆ.ಇಂತಹ ಅಪ್ಪಟ ಅಭಿಮಾನಿಯಾಗಿರುವ ಬಾಲಕ ರತನ್ ಹಾಗೂ ಅವರ ಕುಟುಂಬಸ್ಥರನ್ನು ಭೇಟಿ ಮಾಡುವ ಮೂಲಕ ಅವರಲ್ಲಿ ಸಂತಸ ಮೂಡಿಸಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚಿಗೆ  ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಯ ಸಹೋದರಿಯರ ಮದುವೆ ಖರ್ಚುನ್ನು ಕೂಡಾ ವಹಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ