ಪುನೀತ್ 'ಮಾಯಾಬಜಾರ್' ನಲ್ಲಿ ಎಸ್‌ಪಿಬಿ ವಿಶೇಷ ಗಾಯನ! 
ಸಿನಿಮಾ ಸುದ್ದಿ

ಪುನೀತ್ 'ಮಾಯಾಬಜಾರ್' ನಲ್ಲಿ ಎಸ್‌ಪಿಬಿ ವಿಶೇಷ ಗಾಯನ!

ನಿರ್ದೇಶಕ ರಾಧಾಕೃಷ್ಣ ರೆಡ್ಡಿ ತಮ್ಮ ಚೊಚ್ಚಲ ಚಿತ್ರ "ಮಾಯಾಬಜಾರ್" ನಲ್ಲಿ ಎಲ್ಲಾ ಬಗೆಯ ಸತ್ವಗಳನ್ನು ಹೊಂದಿದ್ದಾರೆಂದು ಕಾಣುತ್ತಿದೆ.  ಪಿಆರ್‌ಕೆ ಪ್ರೊಡಕ್ಷನ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಕವಲುದಾರಿ ನಂತರ ಪುನೀತ್ ರಾಜ್‌ಕುಮಾರ್ ಅವರ ಎರಡನೇ ನಿರ್ಮಾಣ ಯೋಜನೆಯಾಗಿದೆ. 

ನಿರ್ದೇಶಕ ರಾಧಾಕೃಷ್ಣ ರೆಡ್ಡಿ ತಮ್ಮ ಚೊಚ್ಚಲ ಚಿತ್ರ "ಮಾಯಾಬಜಾರ್" ನಲ್ಲಿ ಎಲ್ಲಾ ಬಗೆಯ ಸತ್ವಗಳನ್ನು ಹೊಂದಿದ್ದಾರೆಂದು ಕಾಣುತ್ತಿದೆ.  ಪಿಆರ್‌ಕೆ ಪ್ರೊಡಕ್ಷನ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಕವಲುದಾರಿ ನಂತರ ಪುನೀತ್ ರಾಜ್‌ಕುಮಾರ್ ಅವರ ಎರಡನೇ ನಿರ್ಮಾಣ ಯೋಜನೆಯಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪವರ್ ಸ್ಟಾರ್ ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಒಂದು ಹಾಡಿನಲ್ಲಿ ಅಭಿನಯಿಸುತ್ತಿರುವ ಪುನೀತ್  ಈ ಟ್ರ್ಯಾಕ್ ಚಿತ್ರಕ್ಕೆ ಮಾತ್ರವಲ್ಲದೆ ನಟನಿಗೂ ವಿಶೇಷವಾಗಿದೆ. ಕಾರಣ: ಈ ಹಾಡನ್ನು ಖ್ಯಾತ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಎಸ್ಪಿಬಿ ಗಾಯಕರಾಗಿ ಬರುತ್ತಿದ್ದಾರೆ.ಮತ್ತು ಮಾಯಾಬಜಾರ್‌ನ ಇಡೀ ತಂಡವು ಈ ಬೆಳವಣಿಗೆಯಿಂದ ಡಬಲ್ ಖುಷಿಯಾಗಿದೆ.

ಇದು ರೆಟ್ರೊ ಮತ್ತು ಚಮತ್ಕಾರಿ ಹಾಡು ಎನ್ನಲಾಗುತ್ತಿದ್ದು ಚಿತ್ರಕ್ಕೆ ಗೀತರಚನೆಗಾರರಾಗಿಯೂ, ನಿರ್ದೇಶಕರಾಗಿಯೂ ಪ್ರಸಿದ್ದರಾಗಿರುವ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ,

:ನಿಮಗೂ ಗೊತ್ತು, ನಮಗೂ ಗೊತ್ತು ಕಾಲ ಎಂದೋ ಕುಲಗೆಟ್ಟ್ ಹೋಯ್ತು...." ಎಂದು ಪ್ರಾರಂಭವಾಗುವ ಹಾಡಿಗೆ  ಸಂಗೀತವನ್ನು ಮಿಧುನ್ ಮುಕುಂದನ್ ಸಂಯೋಜಿಸಿದ್ದಾರೆ, ಮತ್ತು  ಇದೊಂದು ಆಕರ್ಷಕ ಹಿನ್ನೆಲೆ ರಾಗವನ್ನು ಸಹ ಹೊಂದಿದೆ.

ಪುನೀತ್ ರಾಜ್‌ಕುಮಾರ್‌ಗಾಗಿ ಹಾಡಲು ಸಂತಸ ಪಟ್ಟಿರುವ ಎಸ್‌ಪಿಬಿ, ಕೇವಲ ಹಾಡನ್ನು ಹಾಡಿದ್ದಲ್ಲದೆ ಅವರು ನಿಜವಾದ ಪ್ರದರ್ಶನವನ್ನೂ ಕೊಟ್ಟಿದ್ದಾರೆ.ಮಾಯಾಬಜಾರ್‌ ತಂಡದಿಂದ ಬಿಡುಗಡೆಗೊಳಿಸಲಾಗಿರುವ ಮೊದಲ ಭಾವಗೀತಾತ್ಮಕ ವಿಡಿಯೋ ಇದಾಗಲಿದೆ.

ರಾಧಾಕೃಷ್ಣ ರೆಡ್ಡಿ ಚಿತ್ರ ಒಂದು ಕಾಮಿಡಿ ಥ್ರಿಲ್ಲರ್ ಆಗಿದ್ದು ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, , ಪ್ರಕಾಶ್ ರಾಜ್, ಸುಧಾರಾಣಿ ಮತ್ತು ಚೈತ್ರ ರಾವ್ ನಟಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಅಭಿಷೇಕ್ ಕಾಸರಗೋಡು ಅವರದ್ದಾಗಿದ್ದರೆ ಇದಾಗಲೇ ಚಿತ್ರತಂಡ ಸೆನ್ಸಾರ್ ಒಪ್ಪಿಗೆಗಾಗಿ ಕಾಯುತ್ತಿದ್ದು  ಫೆಬ್ರವರಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ