ದೀಪ್ತಿ ಸತಿ 
ಸಿನಿಮಾ ಸುದ್ದಿ

ಲೆಗಸಿ ಚಿತ್ರಕ್ಕೆ ಜಾಗ್ವಾರ್ ಚೆಲುವೆ ದೀಪ್ತಿ ಸತಿ ನಾಯಕಿ

ಪಂಚತಂತ್ರ ಖ್ಯಾತಿಯ ವಿಹಾನ್‌ ಗೌಡ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಲೆಗಸಿ ಚಿತ್ರದಲ್ಲಿ ದೀಪ್ತಿ ಸತಿ ನಾಯಕಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ. 

ಪಂಚತಂತ್ರ ಖ್ಯಾತಿಯ ವಿಹಾನ್‌ ಗೌಡ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಲೆಗಸಿ ಚಿತ್ರದಲ್ಲಿ ದೀಪ್ತಿ ಸತಿ ನಾಯಕಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ. 

ಈ ಹಿಂದೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಎಂ. ಸುಭಾಷ್‌ ಚಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಲೆಗಸಿ’ ಚಿತ್ರದಲ್ಲಿ ದೀಪ್ತಿ ಸತಿ ಮತ್ತೂಂದು ಬೋಲ್ಡ್‌ ಆ್ಯಂಡ್‌ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಜನವರಿ 17 ರಂದು ಮುಹೂರ್ತ ನೆರವೇರಿಸಿಕೊಂಡಿರುವ “ಲೆಗಸಿ’ ಚಿತ್ರತಂಡ ಜನವರಿ ಕೊನೆಯಿಂದ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದ್ದು, ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

“ಲೆಗಸಿ’ಯೊಳಗೆ ಇನ್ನೂ ಏನೇನಿದೆ ಎಂಬಿತ್ಯಾದಿ ವಿವರಗಳನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. “ಗ್ರೇಟ್‌ ಬ್ರೋಸ್‌ ಪಿಕ್ಚರ್’ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ಲೆಗಸಿ’ ಚಿತ್ರಕ್ಕೆ ಸುರೇಶ್‌ ರಾಜ್‌ ಸಂಗೀತ, ಸುಂದರ್‌ ಪಿ ಛಾಯಾಗ್ರಹಣವಿದೆ. 

 ಈ ಹಿಂದೆ ನಿಖಿಲ್ ಕುಮಾರಸ್ಲಾಮಿ ನಟನೆಯ ಜಾಗ್ವಾರ್ ಚಿತ್ರದಲ್ಲಿ ಅಭಿನಯಿಸಿದ್ದ ದೀಪ್ತಿ ಸತಿ, ಸುಮಾರು ಎರಡು ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಕಂ ಬ್ಯಾಕ್‌ ಆಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ