ಸಿನಿಮಾ ಸುದ್ದಿ

ನಿಖಿಲ್ ಕುಮಾರಸ್ವಾಮಿ ಮದುವೆ ಫಿಕ್ಸ್, ಹುಡುಗಿ ಯಾರು ಗೊತ್ತ?

Vishwanath S

ಬೆಂಗಳೂರು: ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ರನ್ನು ನಿಖಿಲ್ ಕುಮಾರಸ್ವಾಮಿ ಮದುವೆಯಾಗಲಿದ್ದಾರೆ ಎಂಬ ವದಂತಿ ಹರಡಿತ್ತು. ಇದಕ್ಕೆ ರಚಿತಾ ರಾಮ್ ಸಹ ಸ್ವಷ್ಟನೆ ನೀಡಿ ಸುಮ್ಮನಾಗಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಫಿಕ್ಸ್ ಆಗಿದೆ. 

ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕನ ಅಣ್ಣನ ಮೊಮ್ಮಗಳ ಜೊತೆ ವಿವಾಹವಾಗಲಿದ್ದಾರೆ. ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮದುವೆ ಮೇ 17 ಮತ್ತು 18ರಂದು ನಡೆಯಲಿದೆ.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. 

ದೇವೇಗೌಡರು, ಪತ್ನಿ ಚಿನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರ್, ದೇವೇಗೌಡರ ಪುತ್ರಿಯರಾದ ಅನಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದಾರೆ.

SCROLL FOR NEXT