ಕೆಜಿಎಫ್-2 ಪೋಸ್ಟರ್ 
ಸಿನಿಮಾ ಸುದ್ದಿ

ಅಂತಿಮ ಘಟ್ಟ ತಲುಪಿದ ಕೆಜಿಎಫ್ 2 ಶೂಟಿಂಗ್: ಶೀಘ್ರದಲ್ಲೇ ಬಿಡುಗಡೆ ಡೇಟ್ ರಿವೀಲ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಶೂಟಿಂಗ್ ಬಹುತೇಕ ಫೈನಲ ಹಂತ ತಲುಪಿದೆ. ಸದ್ಯ ಸಿನಿಮಾ ತಂಡ ಹೈದಾರಾಬಾದ್ ಮತ್ತು ಮೈಸೂರಿನನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಶೂಟಿಂಗ್ ಬಹುತೇಕ ಫೈನಲ ಹಂತ ತಲುಪಿದೆ. ಸದ್ಯ ಸಿನಿಮಾ ತಂಡ ಹೈದಾರಾಬಾದ್ ಮತ್ತು ಮೈಸೂರಿನನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.

ಕೆಜಿಎಫ್ ಮೊದಲ ಭಾಗ ನೋಡಿದ್ದ ಪ್ರೇಕ್ಷಕರಿಗೆ 2ನೇ ಭಾಗದ ಬಗ್ಗೆ ಅತೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಸಿನಿಮಾ ತಂಡ ಶೇ. 80 ರಷ್ಟು ಪ್ರಮಾಣದ ಚಿತ್ರೀಕರಣ ಮುಗಿಸಿದೆ, ನಿಗದಿತ ಸಮಯದಲ್ಲಿ ಶೂಟಿಂಗ್ ಪೂರ್ಣಗೊಳಿಸಲು ಚಿತ್ರತಂಡ ಬಿರುಸಾಗಿ ಕೆಲಸ ಮಾಡುತ್ತಿದೆ.

ಮೈಸೂರಿನಲ್ಲಿ ಕೆಜಿಎಫ್2 ಟಾಕಿ ಪೋರ್ಸನ್ ನಡೆಯುತ್ತಿದೆ, ಯಶ್ ಮತ್ತು ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು, ಇದಾದ ನಂತರ ಹೈದರಾಬಾದ್ ನಲ್ಲಿ ಪರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತದೆ. ಬೆಂಗಳೂರು ಮತ್ತು ಕೋಲಾರದಲ್ಲಿ ಶೂಟಿಂಗ್ ನಡೆಯಲಿದೆ.

 ಅಧೀರಾ ಪಾತ್ರದಲ್ಲಿ ಸಂಜಯ್ ದತ್, ಮತ್ತೊಂದು ಪಾತ್ರದಲ್ಲಿ ರವೀನಾ ಟಂಡನ್ ನಟಿಸುತ್ತಿರುವುದು ಖಚಿತವಾಗಿದೆ, ಹಾಗೂ ರವೀನಾ ತಮ್ಮ ಭಾಗದ ಶೂಟಿಂಗ್ ಗಾಗಿ ಶೀಘ್ರವೇ ಸೆಟ್ ಗೆ ಬರಲಿದ್ದಾರೆ. ಇದೇ ವೇಳೆ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸುತ್ತಿದೆ.  ಶೂಟಿಂಗ್ ಮುಗಿದ ಕೂಡಲೇ ಚಿತ್ರ ರಿಲೀಸ್ ಡೇಟ್ ಪ್ರಕಟಿಸಲಾಗುವುದು

ಕೆಜಿಎಫ್: ಚಾಪ್ಟರ್ 1 ಸಿನಿಮಾ ಬಾಕ್ಸಾಫೀಸಲ್ಲಿ ಮಾಡಿದ ಮೋಡಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ನಾಲ್ಕು ಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್ ಎಲ್ಲಾ ಭಾಷೆಗಳಲ್ಲೂ ಸದ್ದು ಮಾಡಿತು. ಇದೀಗ ಕೆಜಿಎಫ್: ಚಾಪ್ಟರ್ 2 ಸಿನಿಮಾ ಸಹ ಅಪಾರ ನೀರೀಕ್ಷೆಗಳನ್ನು ಹುಟ್ಟುಹಾಕಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಅಚ್ಯುತ ಕುಮಾರ್, ಅನಂತ್ ನಾಗ್, ನಾಸರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ ಹಾಗೂ ರಾಮಚಂದ್ರ ರಾಜು ಪಾತ್ರವರ್ಗದಲ್ಲಿದ್ದು ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ವಿಜಯ್ ಕಿರಂಗದೂರ್ ನಿರ್ಮಾಣದ ಈ ಸಿನಿಮಾ 2020 ರ ಬಿಗ್ ಬಜೆಟ್ ಸಿನಿಮಾವಾಗಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT