'ಡಿಯರ್ ಸತ್ಯ'ನ ಜೋಡಿಯಾದ ಅರ್ಚನಾ ಕೊಟ್ಟಿಗೆ 
ಸಿನಿಮಾ ಸುದ್ದಿ

'ಡಿಯರ್ ಸತ್ಯ'ನ ಜೋಡಿಯಾದ ಅರ್ಚನಾ 

ಆರ್ಯನ್ ಸಂತೋಷ್ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಇದೀಗ ಇಮೇಜ್ ಮೇಕೋವರ್ ಜತೆಗೆ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಏಳು ಚಿತ್ರಗಳಲ್ಲಿ ಅಭಿನಯಿಸಿರುವ ನಟ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಇವರೀಗ ತಮ್ಮ ಮುಂದಿನ ಚಿತ್ರ "ಡಿಅಯರ್ ಸತ್ಯ" ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.

ಆರ್ಯನ್ ಸಂತೋಷ್ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಇದೀಗ ಇಮೇಜ್ ಮೇಕೋವರ್ ಜತೆಗೆ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಏಳು ಚಿತ್ರಗಳಲ್ಲಿ ಅಭಿನಯಿಸಿರುವ ನಟ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಇವರೀಗ ತಮ್ಮ ಮುಂದಿನ ಚಿತ್ರ "ಡಿಅಯರ್ ಸತ್ಯ" ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.

ಜಿಗರ್ಥಂಡಾ ಚಿತ್ರದ ಮೂಲಕ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವ ಗಣೇಶ್, ನಟನನ್ನು ಆಕ್ಷನ್ ಹೀರೋ ಆಗಿ ಚಿತ್ರಿಸುವ ಈ ಯೋಜನೆಗೆ ಸಾಥ್ ನೀಡಿದ್ದಾರೆ. ಚಿತ್ರದ ಐವತ್ತು ಪ್ರತಿಶತದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ, ಮತ್ತು ಇದೀಗ ಚಿತ್ರತಂಡ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಲು ಚಿತೀಕರಣವನ್ನು ಒಂದು ತಿಂಗಳ ಕಾಲ ಸ್ಥಗಿತಗೊಳೀಸಿದೆಸಾಕಷ್ಟು ಹುಡುಕಾಟದ ನಂತರ, ನಿರ್ಮಾಪಕರು ಅರ್ಚನಾ ಕೊಟ್ಟಿಗೆ ಅವರನ್ನು  ಅಂತಿಮಗೊಳಿಸಲು ತೀರ್ಮಾನಿಸಿದಾರೆ.ಎಲ್.ವಿ.ಪ್ರಸಾದ್ ಅವರ ಆರ್ಟ್ ಸ್ಕೂಲ್ ನ ಹಳೆಯ ವಿದ್ಯಾರ್ಥಿಯಾಗಿದ್ದ ಈ ನಟಿ ಅರಣ್ಯಕಾಂಡ ಎಂಬ ಸಾಹಸಮಯ ಕಥಾನಕದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿದ್ದರು.ಇದೀಗ ನಟಿ ಡಿಯರ್ ಸತ್ಯದಲ್ಲಿ ಆರ್ಯನ್ ಸಂತೋಷ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಲಲಿದ್ದಾರೆ.

ಅರ್ಚನಾ ಚಿತ್ರದ ಸೆಟ್‌ಗಳಿಗೆ ಸೇರಿಕೊಂಡು ಮೂರು ದಿನಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.ಮಂಗಳವಾರ ಅವರು ಹಾಡಿನ ಶೂಟಿಂಗ್ ಪ್ರಾರಂಭಿಸಲಿದ್ದಾರೆ.ಡಿಯರ್ ಸತ್ಯ ಒಂದು ರಿವೇಂಜ್ ಥ್ರಿಲ್ಲರ್ ಚಿತ್ರ ಇದು ನಿಜವಾದ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗಿದೆ. ವಿಂಟರ್ಬ್ರಿಡ್ಜ್ ಸ್ಟುಡಿಯೋಸ್ ಮತ್ತು ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಲನಚಿತ್ರವನ್ನು ಪೂರ್ಣಗೊಳಿಸಲು ತಂಡವು 22 ದಿನಗಳ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಿದೆ. ವಿನೋದ್ ಭಾರತಿ ಕ್ಯಾಮೆರಾ, ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT