ಸ್ಪಂದನಾ 
ಸಿನಿಮಾ ಸುದ್ದಿ

'ಲೆಟ್ಸ್ ಬ್ರೇಕಪ್'- ಶ್ರೀಲೀಲಾ ಜಾಗಕ್ಕೆ ಸ್ಪಂದನಾ ಎಂಟ್ರಿ

ಶೂಟಿಂಗ್ ಶೆಡ್ಯೂಲ್ ಗಳ ಹೊಂದಾಣಿಕೆಯಾಗದ ಕಾರಣ ನಟಿ ಶ್ರೀಲೀಲಾ 'ಲೆಟ್ಸ್ ಬ್ರೇಕಪ್' ನಿಂದ ದೂರವಾಗಿದ್ದಾರೆ. ಹಾಗೆಯೇ ಆಕೆಯ ಸ್ಥಾನದಲ್ಲಿ ಸಂಜನಾ ದಾಸ್ ಆಗಮಿಸಿದ್ದಾರೆ. ವಿಶೇಷವೆಂದರೆ ಸಂಜನಾ ದಾಸ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವಾಗಲೇ ಅವರಿಗೆ "ಸ್ಪಂದನಾ" ಎಂದು ಹೊಸ ಹೆಸರೂ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಸಂಜನಾ ಹೆಸರಿನ ಹಲವು ನಟಿಯರಿರುವ

ಶೂಟಿಂಗ್ ಶೆಡ್ಯೂಲ್ ಗಳ ಹೊಂದಾಣಿಕೆಯಾಗದ ಕಾರಣ ನಟಿ ಶ್ರೀಲೀಲಾ 'ಲೆಟ್ಸ್ ಬ್ರೇಕಪ್' ನಿಂದ ದೂರವಾಗಿದ್ದಾರೆ. ಹಾಗೆಯೇ ಆಕೆಯ ಸ್ಥಾನದಲ್ಲಿ ಸಂಜನಾ ದಾಸ್ ಆಗಮಿಸಿದ್ದಾರೆ. ವಿಶೇಷವೆಂದರೆ ಸಂಜನಾ ದಾಸ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವಾಗಲೇ ಅವರಿಗೆ "ಸ್ಪಂದನಾ" ಎಂದು ಹೊಸ ಹೆಸರೂ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಸಂಜನಾ ಹೆಸರಿನ ಹಲವು ನಟಿಯರಿರುವ ಕಾರಣ ಇವರಿಗೆ ಸ್ಪಂದನಾ ಎಂದು ಕರೆಯಲಾಗಿದೆಯಂತೆ. 

ಮನಸ್ಮಿತಾ ಚಿತ್ರದಲ್ಲಿ ಈ ನಟಿ ಅಭಿನಯಿಸುತ್ತಿದ್ದು ಚಿತ್ರದಲ್ಲಿ ಸ್ಪಂದನಾ ಪಾಲಿನ ಶೂಟಿಂಗ್ ಇದಾಗಲೇ ಮುಕ್ತಾಯವಾಗಿದೆ. ಇನ್ನು ಈ ನವನಟಿ  ಮೊದಲ ಬಾರಿಗೆ ನಾಯಕ ವಿಹಾನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿದ್ದಾರೆ

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನೆಮಾದಲ್ಲಿ ನಟನೆಯ ಪಾಠ ಕಲಿತಿರುವ ಸಂಜನಾಮುಂಬೈನಲ್ಲಿ ಅನುಪಮ್ ಖೇರ್ ಅವರ ಜತೆಗೆ ಸಹ ತ್ತೊಂದು ಕೋರ್ಸ್ ಮಾಡಿದ್ದಾರೆ.

ಸ್ಪಂದಾನಾ ಇದೀಗ ಶ್ರೀಲೀಲಾ ಬದಲಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರದ ಶೂಟಿಂಗ್ ಮೇನಲ್ಲಿ ಪ್ರಾರಂಭವಾಗಲಿದೆ. ಚಿತ್ರ ನಿರ್ಮಾಪಕರು ಸ್ಪಂದನಾ ಅವರ ಆಡಿಷನ್ ತೆಗೆದುಕೊಂಡಿದ್ದು ರೊಮ್ಯಾಂಟಿಕ್ ಡ್ರಾಮಾಗೆ ಈ ನಟಿ ಸೂಕ್ತ ಆಯ್ಕೆ ಎಂದು ಭಾವಿಸಿದ್ದಾರೆ. ಜಯಣ್ಣ ಕಂಬೈನ್ಸ್ ನಿರ್ಮಾಣದ ಈ ಚಿತ್ರ ನಟಿ ಪಾಲಿಗೆ ದೊಡ್ಡ ವೇದಿಕೆಯಾಗಿರಲಿದೆ. 

ಈ ನಡುವೆ ಪ್ರೇಮಿಗಳ ದಿನದಂದು ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸಿದೆ. ಇನ್ನು ಲೆಟ್ಸ್ ಬ್ರೇಕಪ್‌ಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ  ಸ್ವರೂಪ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ವಿಹಾನ್ ಜತೆಗಾತಿಯಾಗಿ ಸ್ಪಂದನಾ ಕಾಣಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್: ಪರಸ್ಪರ ಆಲಿಂಗನ, ಒಟ್ಟಿಗೆ ಬ್ರೇಕ್ ಫಾಸ್ಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT