ಸಿನಿಮಾ ಸುದ್ದಿ

ಕೊರೋನಾ ಎಫೆಕ್ಟ್: ಜೀವನ ಸಾಗಿಸಲು ಕಿರಾಣಿ ಅಂಗಡಿ ತೆರೆದ ಚಲನ ಚಿತ್ರ ನಿರ್ಮಾಪಕ!

Sumana Upadhyaya

ಚೆನ್ನೈ: ಕೊರೋನಾ ವೈರಸ್ ನಿಂದಾಗಿ ಚಲನಚಿತ್ರೋದ್ಯಮ ಕೂಡ ಕಳೆದ 4 ತಿಂಗಳಿನಿಂದ ಸ್ಥಗಿತಗೊಂಡಿದ್ದು ಅನೇಕ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಬದುಕು ಬೀದಿಗೆ ಬಂದಿದೆ.

ತಮಿಳು ನಾಡಿನ ಚಿತ್ರ ನಿರ್ಮಾಪಕರೊಬ್ಬರು ಜೀವನೋಪಾಯಕ್ಕಾಗಿ ರೇಷನ್ ಅಂಗಡಿಯನ್ನು ತೆರೆದಿದ್ದಾರೆ. ಕಳೆದ 10 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿರುವ ಆನಂದ್ ಕೋವಿಡ್-19ನಿಂದಾಗಿ ಮುಂದಿನ ವರ್ಷದವರೆಗೆ ದೇಶಾದ್ಯಂತ ಛಿಯೇಟರ್ ಗಳು ಬಂದ್ ಆಗಿರಲಿವೆ ಎಂದು ಮನದಟ್ಟಾದ ಬಳಿಕ ಜೀವನೋಪಾಯಕ್ಕೆ ಬೇರೆ ದಾರಿ ಕಂಡುಕೊಂಡಿದ್ದಾರೆ.
ತಮ್ಮ ಉಳಿತಾಯದಲ್ಲಿ ಸ್ನೇಹಿತನ ಕಟ್ಟಡದಲ್ಲಿಯೇ ಅಂಗಡಿ ಬಾಡಿಗೆ ಪಡೆದು ಚೆನ್ನೈಯ ಮೌಲಿವಕ್ಕಮ್ ನಲ್ಲಿ ಕಿರಾಣಿ ಅಂಗಡಿ ಆರಂಭಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ತಮಿಳು ನಾಡಿನಲ್ಲಿ ರೇಷನ್ ಮತ್ತು ಅಗತ್ಯ ಸಾಮಾನಿನ ಅಂಗಡಿಗಳನ್ನು ತೆರೆಯಲು ಮಾತ್ರ ಸರ್ಕಾರ ಅನುಮತಿ ಕೊಟ್ಟಿದೆ ಎಂದು ಗೊತ್ತಾದ ಬಳಿಕ ನಾನು ರೇಷನ್ ಅಂಗಡಿ ತೆರೆಯಲು ನಿರ್ಧರಿಸಿದೆ. ಅಲ್ಲಿ ಅಕ್ಕಿ, ಕಾಳು, ಎಣ್ಣೆಗಳನ್ನು ಕಡಿಮೆ ಬೆಲೆಗೆ ಗ್ರಾಹಕರನ್ನು ಸೆಳೆಯಲು ಮಾರಾಟ ಮಾಡುತ್ತಿದ್ದು ಇದರಿಂದ ಖುಷಿ ಸಿಕ್ಕಿದೆ ಎನ್ನುತ್ತಾರೆ.

ಚಲನಚಿತ್ರ ನಿರ್ಮಾಣ ಬಿಟ್ಟು ಅಂಗಡಿ ತೆರೆಯಲು ಮನಸ್ಸು ಹೇಗಾಯಿತು ಎಂದು ಕೇಳಿದ್ದಕ್ಕೆ ಆನಂದ್, ಜನರು ಭೀತಿಯಲ್ಲಿರುವುದರಿಂದ ಕೊರೋನಾ ಸಾಂಕ್ರಾಮಿಕ ಹೆಚ್ಚಾಗುತ್ತಿರುವುದರಿಂದ ಈ ವರ್ಷ ಚಲನಚಿತ್ರ ಉದ್ಯಮ ಆರಂಭವಾಗಬಹುದು.  ಥಿಯೇಟರ್ ತೆರೆದು ವ್ಯಾಪಾರ ಚೆನ್ನಾಗಿ ನಡೆಯಬಹುದು ಎಂಬ ನಂಬಿಕೆ ನನಗಿಲ್ಲ. ಮಾಲ್, ಪಾರ್ಕ್, ಬೀಚ್ ಗಳು ತೆರೆದರೆ ಮಾತ್ರ ಥಿಯೇಟರ್ ಗಳು ಸಹ ತೆರೆಯುತ್ತವೆ. ನಂತರವಷ್ಟೇ ನಮಗೆ ಕೆಲಸ ಸಿಗುವುದು, ಅಲ್ಲಿಯವರೆಗೆ ಈ ಕಿರಾಣಿ ಅಂಗಡಿ ನಡೆಸುತ್ತೇನೆ ಎನ್ನುತ್ತಾರೆ.

ಆನಂದ್ ಅವರು ತಮಿಳಿನಲ್ಲಿ ಒರು ಮಜೈ ನಾಂಗು ಸಾರಲ್, ಮೌನ ಮಜೈ ಚಿತ್ರಗಳನ್ನು ತಯಾರಿಸಿದ್ದು ತುಣಿಂತು ಸೈ ನಿರ್ಮಾಣ ಹಂತದಲ್ಲಿದೆ.

SCROLL FOR NEXT