ಸುಮನ್ ನಗರ್ ಕರ್ 
ಸಿನಿಮಾ ಸುದ್ದಿ

ಕೊರೋನಾ ಚ್ಯಾರಿಟಿಗಾಗಿ ಸುಮನ್ ನಗರ್ ಕರ್ 400 ಕಿ.ಮೀ. ಓಟ

ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. 

ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. 

ಈ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದು, ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. 

ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ fund raise(ಹಣ ಸಂಗ್ರಹಣೆ) ಮಾಡಲಿದ್ದಾರೆ.

ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ. ಈ ಒಂದು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡಲಿಚ್ಚಿಸುವವರು ಫೇಸ್ ಬುಕ್ ನ Move2feed ಅಥವಾ ಸುಮನ್ ನಗರ್ ಕರ್ ಅವರ Facebook ಪೇಜ್ ಅಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

 ಕೆಲ ವರ್ಷಗಳ ಬ್ರೇಕ್ ನಂತರ ನಟನೆಗೆ ಮರಳಿರುವ ಸುಮನ್, ತಮ್ಮದೇ ನಿರ್ಮಾಣ ಸಂಸ್ಥೆಯಿಂದ "ಬಬ್ರೂ" ಹಾಗೂ "ಬ್ರಾಹ್ಮಿ" ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿಯವರ "ಲಾಕ್ಡೌನ್ ಡೈರೀಸ್" ಹಿಂದಿ ಕಿರುಚಿತ್ರ ಹಾಗೂ ಸಿಂಗಾಪುರ್ ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ "ಡಾಟ್ಸ್" ನಲ್ಲಿ ಕೂಡ ಅಭಿನಯಿಸಿದ್ದಾರೆ. ಆದರೆ ಎಷ್ಟೋ ಜನರಿಗೆ ಸುಮನ್ ಬಗ್ಗೆ ಗೊತ್ತಿರದ ವಿಷಯವೆಂದರೆ ಆಕೆ ಮ್ಯಾರಥಾನ್(42.2km) ರನ್ನ ರ್ ಎಂಬುದು. ಅಮೆರಿಕಾ ಹಾಗೂ ಬೆಂಗಳೂರಿನ ಹಲವಾರು ಮ್ಯಾರಥಾನ್ ರೇಸ್ಗಳಲ್ಲಿ ಇವರು ಭಾಗವಹಿಸಿದ್ದಾರೆ. ಈಗ ಈ ಇಪ್ಪತ್ತು ದಿನಗಳ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಅಭಿಯಾನದ ಮೂಲಕ ಹಣ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ನೆರವಾಗುವ ಆಸೆ ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಬೆಳಗಾವಿಯಲ್ಲಿ ಎಂಇಎಸ್, ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ; ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರ ಬಂದ್!

ತಾಪಮಾನದಲ್ಲಿ ಮತ್ತಷ್ಟು ಕುಸಿತ: ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಳ, ವಾಯು ಗುಣಮಟ್ಟದಲ್ಲೂ ಬದಲಾವಣೆ

ಮಧ್ಯಪ್ರದೇಶ: ಕೋಟಿ ಕೋಟಿ ಬಹುಮಾನ ಹೊಂದಿದ್ದ 10 ನಕ್ಸಲರು ಶಸ್ತ್ರಾಸ್ತ್ರ ಸಹಿತ ಶರಣಾಗತಿ!

SCROLL FOR NEXT