ನಟಿ ವಿಜಯಲಕ್ಷ್ಮಿ 
ಸಿನಿಮಾ ಸುದ್ದಿ

ಆತ್ಮಹತ್ಯೆಗೆ ಯತ್ನಿಸಿದ ನಟಿ ವಿಜಯಲಕ್ಷ್ಮಿ, ಆಸ್ಪತ್ರೆಗೆ ದಾಖಲು

ನಾಗಮಂಡಲ ಹಾಗೂ ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಭಾನುವಾರ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೆನ್ನೈ: ನಾಗಮಂಡಲ ಹಾಗೂ ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಭಾನುವಾರ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ನನ್ನ ಕಡೆಯ ವಿಡಿಯೋ ಎಂದು ಹೇಳಿರುವ ನಟಿ, ತಮ್ಮ ಸಾವಿಗೆ ನಟ, ರಾಜಕಾರಣಿ ಸೀಮನ್ ಮತ್ತು ಹರಿಂದರನ್ ಅವರುಗಳೇ ಕಾರಣ. ನಾನು ಈಗಾಗಲೇ ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಫೇಸ್ ಬುಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೀನಿ ಎಂಬ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆ. ಮಹಿಳೆಯಾಗಿ ನಾನು ಎಷ್ಟು ತಡೆದುಕೊಳ್ಳಬೇಕು ಅಷ್ಟು ತಡೆದುಕೊಂಡಿದ್ದೇನೆ. ಇನ್ನುಮುಂದೆ ತಡೆದುಕೊಳ್ಳಲಾಗದು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ನಾನು ವೇಶ್ಯಾವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದಾರೆ.

'ನಾನೀಗ ಒಂದಷ್ಟು ಬಿಪಿ ಮಾತ್ರೆಗಳನ್ನು ನುಂಗಿದ್ದೇನೆ. ಇನ್ನು ಸ್ವಲ್ಪ ಹೊತ್ತಿಗೆ ನನ್ನ ಬಿಪಿ ಕಮ್ಮಿ ಆಗಲಿದೆ. ನನ್ನ ಸಾವಿಗೆ ಕಾರಣರಾದ ಈ ಸೀಮನ್‌ ಮತ್ತು ಹರಿಂದ್ರನ್ ಅವರನ್ನು ಯಾವುದೇ ಕಾರಣಕ್ಕೂ ಬಿಡಲೇಬೇಡಿ. 'ನಾಮ್ ತಮಿಳರ್ ಕಚ್ಚಿ' ಎಂಬ ಪಕ್ಷವನ್ನು ಸೀಮನ್ ಕಟ್ಟಿದ್ದಾನೆ. ಕನ್ನಡಿಗರಿಗೆ ಆತ ಬಹಳಷ್ಟು ಕಾಟ ಕೊಟ್ಟಿದ್ದಾನೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಮಾತೃಭಾಷೆ ತಮಿಳು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ತುಂಬ ತೊಂದರೆ ನೀಡಿದ್ದಾನೆ' ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG, ಗೆದ್ದ RR ಪ್ಲೇ ಆಫ್ ಕನಸು ಜೀವಂತ!

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

SCROLL FOR NEXT