ಅಶುತೋಷ್ ಭಾಕ್ರೆ 
ಸಿನಿಮಾ ಸುದ್ದಿ

ಸಿನಿಮಾ ರಂಗಕ್ಕೆ ಮತ್ತೊಂದು ಆಘಾತ: ಮರಾಠಿ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆ

ಮರಾಠಿ ನಟ ಅಶುತೋಷ್ ಭಾಕ್ರೆ ಮರಾಠವಾಡ ಪ್ರಾಂತ್ಯದ ನಾಂದೇಡ್‌ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ 32 ವರ್ಷದ ಅಶುತೋಷ್ ಗಣೇಶನಗರದ  ಅವರ  ಪೋಷಕರ ಫ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಬಯಿ: ಮರಾಠಿ ನಟ ಅಶುತೋಷ್ ಭಾಕ್ರೆ ಮರಾಠವಾಡ ಪ್ರಾಂತ್ಯದ ನಾಂದೇಡ್‌ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ 32 ವರ್ಷದ ಅಶುತೋಷ್ ಗಣೇಶನಗರದ ಅವರ  ಪೋಷಕರ ಪ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಇವರು ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಯಾವ ಕಾರಣಕ್ಕೆ ಸಾಯುತ್ತಾನೆ ಎಂಬುದನ್ನು ವಿಶ್ಲೇಷಿಸಿದ್ದರು ಎನ್ನುತ್ತಿವೆ ಅಧೀಕೃತ ಮೂಲಗಳು.

‘ಖುಲ್ತಾ ಕಲಿ ಖುಲೇನಾ’ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟಿ ಮಯೂರಿ ದೇಶ್‌ಮುಖ್ ಅವರ ಪತಿ ಅಶುತೋಷ್‌. ‘ಭಾಕರ್’‌ ಹಾಗೂ ‘ಇಚಾರ್‌ ಥರ್ಲಾ ಪಕ್ಕ’ ಮರಾಠಿ ಸಿನಿಮಾಗಳಲ್ಲಿ ಈ ನಟ ನಟಿಸಿದ್ದಾರೆ.

ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ ಎಂದಿದ್ದಾರೆ ಪೊಲೀಸರು. ನಾಂದೇಡ್‌ನ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ದಾಖಲಾಗಿದ್ದು, ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದ ಫಲಿತಾಂಶ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ 'ರಹದಾರಿ': ಪ್ರಧಾನಿ ಮೋದಿ ಮಾತಿನ ಮರ್ಮವೇನು?

ಟಿ-20 ವಿಶ್ವಕಪ್: ಭಾರತ ತಂಡ ಪ್ರಕಟ, ಶುಭ್ ಮನ್ ಗಿಲ್ ಗೆ ಕೊಕ್‌, ಇಶಾನ್ ಕಿಶಾನ್ ಗೆ ಸ್ಥಾನ!

ಹಿಂದೂ ಯುವಕನ ಬರ್ಬರ ಹತ್ಯೆ: ವ್ಯಾಪಕ ಆಕ್ರೋಶ ಬೆನ್ನಲ್ಲೆ 7 ಆರೋಪಿಗಳನ್ನು ಬಂಧಿಸಿದ್ದಾಗಿ ಯೂನಸ್ ಘೋಷಣೆ

ಕಲಬುರಗಿ: ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆ ಬಳಿ ಬೆಂಕಿ ಹಚ್ಚಿಕೊಂಡು BJP ಕಾರ್ಯಕರ್ತೆ ಆತ್ಮಹತ್ಯೆ

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

SCROLL FOR NEXT