ಹೋಂ ಮಿನಿಸ್ಟರ್ 
ಸಿನಿಮಾ ಸುದ್ದಿ

ಲಾಕ್‌ಡೌನ್ ಬಳಿಕ ಬರ್ತಿದ್ದಾರೆ 'ಹೋಂ ಮಿನಿಸ್ಟರ್': ರಿಯಲ್ ಸ್ಟಾರ್ ಚಿತ್ರಕ್ಕೆ ಸಿಕ್ಕಿದೆ ಯು/ಎ ಪ್ರಮಾಣಪತ್ರ

ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷ್ಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.

ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷಿಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.

ಉಪೇಂದ್ರ ಅಭಿನಯದ ಚಿತ್ರಕ್ಕೆ ಸೆನ್ಸಾರ್ ಬೋರ್ಡ್  ಯು / ಎ ಪ್ರಮಾಣಪತ್ರ ನೀಡಿದೆ. ಪೂರ್ಣ ನಾಯ್ಡು ಪ್ರೊಡಕ್ಷನ್ಸ್ ಅಡಿಯಲ್ಲಿ ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರ ಲಾಕ್ ಡೌನ್ ನಂತರದಲ್ಲಿ ತೆರೆಕಾಣುತ್ತಿರುವ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. 

ಹೋಂ ಮಿನಿಸ್ಟರ್ ಚಿತ್ರಕ್ಕೆ ಉಪ್ಪಿ ಜೋಡಿಯಾಗಿ ವೇದಿಕಾ ಕುಮಾರ್ ಕಾಣಿಸಿಕೊಳ್ಳುತ್ತಿದ್ದು ತಾನ್ಯಾ ಹೋಪ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಶೀರ್ಷಿಕೆಯು ಕುತೂಹಲವನ್ನು ಹುಟ್ಟುಹಾಕಿದ್ದು ವಿಶೇಷವಾಗಿ ಉಪೇಂದ್ರ  ಈ ಹಿಂದೆ ಚಿತ್ರ ಶೀರ್ಷಿಕೆಗೆ ಹಲವು ಅರ್ಥಗಳಿದೆ ಎಂದು ಪತ್ರಿಕೆಗೆ ತಿಳಿಸಿದ್ದರು. "ಇದು ರಾಜಕೀಯ ಕಥಾನಕ ಎಂದು ಭಾವಿಸಲಾಗುತ್ತದೆ. ಆದರೆ ಹೋಂ ಮಿನಿಸ್ಟರ್ ಮನೆಯಲ್ಲೇ ಯಾರನ್ನಾದರೂ ಗುರುತಿಸಲು ಬಳಸುವ ಪದವಾಗಿರಬಹುದು. " ಉಪೇಂದ್ರ ಹೇಳಿದ್ದಾರೆ.

ಹೋಂ ಮಿನ್ಸ್ಟರ್ ಚಿತ್ರಕ್ಕೆ 2.0 ರ ಆಂಟನಿ ಖ್ಯಾತಿಯಮೊಹಮದ್ ಘಿಬ್ರಾನ್ ಸಂಗೀತ ಸಂಯೋಜಿಸಿದ್ದರೆ ಸಾಧು ಕೋಕಿಲಾ ಮತ್ತು ಅವಿನಾಶ್ ಪ್ರಮುಖ ಪಾತ್ರದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!