ಸಿನಿಮಾ ಸುದ್ದಿ

ಬಾಲಿವುಡ್ ನಟನ ಅಧಿಕಾರ, ಪಕ್ಷಪಾತದ ಕುರಿತ ಮಾಹಿತಿ ಬಹಿರಂಗಪಡಿಸಿದ ಸೋನು ನಿಗಮ್

Srinivas Rao BV

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್ ನ ಅಧಿಕಾರ, ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಈ ಬಗ್ಗೆ ಮಾತನಾಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ವ್ಲೋಗ್ (ವಿಡಿಯೋ) ಪ್ರಕಟಿಸಿರುವ ಸೋನು ನಿಗಮ್, ತಾವೂ ಸಹ ಬಾಲಿವುಡ್ ನಲ್ಲಿರುವ ಅಧಿಕಾರ, ಸ್ವಜನ ಪಕ್ಷಪಾತದ ಸಂತ್ರಸ್ತ ಎಂದು ಯಾವುದೇ ನಟನ ಹೆಸರನ್ನೂ  ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಾವ ನಟನ ವಿರುದ್ಧ ಎಲ್ಲರೂ ಬೆರಳು ತೋರುತ್ತಿದ್ದಾರೋ ಆತ ನನಗೂ ಸಹ ಅದೇ ರೀತಿ ಮಾಡಿದ್ದು ಹಾಡದಂತೆ ಅಡ್ಡಗಾಲು ಹಾಕಿದ್ದರು. ಅದೇ ನಟ ಅರ್ಜಿತ್ ಸಿಂಗ್ ಗೂ ಸಮಸ್ಯೆ ಮಾಡಿದ್ದಾರೆ. ಏನಿದು? ನಿಮ್ಮ ಅಧಿಕಾರವನ್ನು ಹೀಗೆ ಬಳಕೆ ಮಾಡಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಎಂದು ಸೋನು ನಿಗಮ್ ಪ್ರಶ್ನಿಸಿದ್ದಾರೆ. ನಾನು ಹಾಡಿರುವ ಹಲವು ಹಾಡುಗಳನ್ನು ಡಬ್ ಮಾಡಿದ್ದಾರೆ. ಇದು ಅವಮಾನಕರವಲ್ಲವೇ? ಎಂದು ಪ್ರಶ್ನಿಸಿದ್ದಾರೆ. ನಾನು 1989 ರಿಂದ ಸಂಗೀತ ಕ್ಷೇತ್ರದಲ್ಲಿದ್ದೇನೆ ನನಗೇ ಈ ರೀತಿ ಮಾಡಿದರೆ ಯುವ ಹಾಡುಗಾರರಿಗೆ ಏನೆಲ್ಲಾ ಮಾಡಬಹುದು ಎಂದು ಸೋನು ನಿಗಮ್ ಪ್ರಶ್ನಿಸಿದ್ದಾರೆ.

"ಒಂದೇ ಹಾಡನ್ನು 9 ಜನರು ಹಾಡುವಂತೆ ಮಾಡುತ್ತೀರಿ... ಸ್ವಲ್ಪ ದಯೆ ತೋರಿಸಿ, ಆಗ ಜನರು ಆತ್ಮಹತ್ಯೆಗೆ ಶರಣಾಗುವುದಿಲ್ಲ"  ಸಂಗೀತ ಕ್ಷೇತ್ರದಲ್ಲೂ ಶೀಘ್ರವೇ ಆತ್ಮಹತ್ಯೆ ಸುದ್ದಿಗಳನ್ನು ಕೇಳುತ್ತೀರಿ" ಎಂದಿದ್ದಾರೆ.  ಸಂಗೀತ ಕಂಪನಿಗಳಿಗೆ ವಿಶೇಷವಾಗಿ ಮನವಿ ಮಾಡುತ್ತೇನೆ, ಇವತ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಓರ್ವ ನಟ, ನಾಳೆ ಇದೇ ರೀತಿಯಲ್ಲಿ ಓರ್ವ ಹಾಡುಗಾರ ಕಂಪೋಸರ್, ಬರಹಗಾರರ ಬಗ್ಗೆಯೂ ನೀವು ಕೇಳಬಹುದು, ಏಕೆಂದರೆ ಸಿನಿಮಾ ಕ್ಷೇತ್ರದಂತೆಯೇ ಸಂಗೀತ ಕ್ಷೇತ್ರದಲ್ಲೂ ಮಾಫಿಯಾಗಳಿವೆ ಎಂದು ಸೋನು ನಿಗಮ್ ಎಚ್ಚರಿಸಿದ್ದಾರೆ. 

SCROLL FOR NEXT