ಸಿನಿಮಾ ಸುದ್ದಿ

ಭಾರತ- ಚೀನಾ ಸಂಘರ್ಷ ಭಾವನಾತ್ಮಕ ದುರುಪಯೋಗ ಬೇಡ: ಕಮಲ್ ಹಾಸನ್

Srinivas Rao BV

ನವದೆಹಲಿ: ಭಾರತ-ಚೀನಿ ಯೋಧರ ನಡುವೆ ನಡೆದ ಸಂಘರ್ಷವನ್ನು ಭಾವನಾತ್ಮಕವಾಗಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆಯೆಂದು ನಟ-ರಾಜಕಾರಣಿ ಕಮಲಹಾಸನ್ ಅವರು ಅಪಾದಿಸಿದ್ದಾರೆ.

ಯಾರೂ ಕೂಡಾ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿಲ್ಲ ಹಾಗೂ ಭಾರತೀಯ ಸೇನೆಯ ಯಾವುದೇ ಪೋಸ್ಟ್ ನ್ನೂ ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. 'ಇಂತಹ ಹೇಳಿಕೆಗಳ ಮೂಲಕ ಜನರನ್ನು ಭಾವನಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುವುದು ಬೇಡ, ಕೂಡಲೆ ಇದನ್ನು ನಿಲ್ಲಿಸಬೇಕು ಮನವಿ ಮಾಡಿದ್ದಾರೆ. ಇದೇ ವೇಳೆ ಪ್ರಶ್ನಿಸುವುದನ್ನು ದೇಶವಿರೋಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿರುವುದನ್ನು ಕಿಡಿಗೇಡಿತನ ಎಂದು ಹೇಳಿದ್ದ ಪ್ರಧಾನಿ ಕಾರ್ಯಾಲಯದ ಸ್ಪಷ್ಟನೆಯನ್ನೂ ಟೀಕಿಸಿರುವ ಕಮಲ್ ಹಾಸನ್, ಈ ರೀತಿಯ ಹೇಳಿಕೆಗಳ ಮೂಲಕ ಜನರನ್ನು ಹಾದಿ ತಪ್ಪಿಸುವುದು ಕಿಡೀಗೇಡಿತನ ಎಂದು ಹೇಳಿದ್ದಾರೆ. ಪ್ರಶ್ನೆ ಮಾಡುವ ಹಕ್ಕು ಪ್ರಜಾಪ್ರಭುತ್ವದ ತಳಹದಿ, ನಮಗೆ ನಿಜ ತಿಳಿಯುವವರೆಗೂ ನಾವು ಪ್ರಶ್ನೆ ಮಾಡುತ್ತಲೇ ಇರುತ್ತೇವೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ. 

SCROLL FOR NEXT