ಸುದೀಪ್ ಮತ್ತು ಅಜನೀಶ್ ಲೋಕನಾಥ್ 
ಸಿನಿಮಾ ಸುದ್ದಿ

ಸುದೀಪ್ ನಟನೆಯ 'ಫ್ಯಾಂಟಮ್' ಗೆ ಅಜನೀಶ್ ಲೋಕನಾಥ್ ಸಂಗೀತ

ಕಿಚ್ಚ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ 'ಫ್ಯಾಂಟಮ್‌' ಚಿತ್ರ ಘೋಷಣೆ ಆದಾಗಲೇ ಅಭಿಮಾನಿಗಳು ಥ್ರಿಲ್‌ ಆಗಿದ್ದರು. 'ರಂಗಿತರಂಗ' ರೀತಿಯ ಬೆಸ್ಟ್‌ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ಭರ್ಜರಿಯಾಗಿ ರಂಜಿಸಿದ ನಿರ್ದೇಶಕ ಅನೂಪ್‌ ಭಂಡಾರಿ.

ಕಿಚ್ಚ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ 'ಫ್ಯಾಂಟಮ್‌' ಚಿತ್ರ ಘೋಷಣೆ ಆದಾಗಲೇ ಅಭಿಮಾನಿಗಳು ಥ್ರಿಲ್‌ ಆಗಿದ್ದರು. 'ರಂಗಿತರಂಗ' ರೀತಿಯ ಬೆಸ್ಟ್‌ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ಭರ್ಜರಿಯಾಗಿ ರಂಜಿಸಿದ ನಿರ್ದೇಶಕ ಅನೂಪ್‌ ಭಂಡಾರಿ ಅವರು ಸುದೀಪ್‌ಗಾಗಿ ಒಂದು ಡಿಫರೆಂಟ್‌ ಆದಂತಹ ಕಥೆಯನ್ನೇ 'ಫ್ಯಾಂಟಮ್' ಚಿತ್ರಕ್ರ್ಕಾಗಿ ಸಿದ್ಧ ಮಾಡಿಕೊಂಡಿದ್ದಾರೆ. ಫ್ಯಾಂಟಮ್ ಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸುದೀಪ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.ಗಾಯಕನೂ ಆಗಿರುವ ಅಜನೀಶ್ ರಂಗನಾಥ್ ಈ ಹಿಂದೆ ಹಲವು ಪ್ರಸಿದ್ಧ ನಿರ್ದೇಶಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಂಸಲೇಖ, ಗುರುಕಿರಣ್ ಮತ್ತು ಅರ್ಜುನ್
ಜನ್ಯ  ಅವರ ಸಂಗೀತಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ.

ಶಿಶಿರ ಮೂಲಕ ಪಾದಾರ್ಪಣೆ ಮಾಡಿದ ಅಜನೀಶ್, ಉಳಿದವರು ಕಂಡಂತೆ, ರಂಗಿತರಂಗ, ಕಿರಿಕ್ ಪಾರ್ಟಿ, ಸರ್ಕಾರಿ ಹಿ. ಪ್ರಾ ಶಾಲೆ , ಬೆಲ್ ಬಾಟಮ್ , ಅವನೇ ಶ್ರೀ ಮನ್ನಾರಾಯಣ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

'ಫ್ಯಾಂಟಮ್‌' ಚಿತ್ರತಂಡ ದೊಡ್ಡ ಮಟ್ಟದಲ್ಲಿಯೇ ಪ್ಲ್ಯಾನ್‌ ಮಾಡಿಕೊಂಡು, ಅದನ್ನು ಕಾರ್ಯರೂಪಕ್ಕೆ ತರುತ್ತಿದೆ. ಬಹುಕೋಟಿ ವೆಚ್ಚದಲ್ಲಿ ತೆಲಂಗಾಣದಲ್ಲಿ ಕಾಡಿನ ಸೆಟ್‌ ಹಾಕಿಸುತ್ತಿರುವುದು ವಿಶೇಷ. ಕಳೆದ ಎರಡು ವಾರಗಳಿಂದ ಸೆಟ್‌ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ಶಾಲಿನಿ ಬ್ಯಾನರ್ಸ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಮಂಜುನಾಥ್ ಗೌಡ ನಿರ್ಮಾಣದ ಸಿನಿಮಾ ಮೂಲಕ ನಿರ್ದೇಶಕ, ನಿರ್ಮಾಪಕ ಮತ್ತು ನಟ ಇದೇ ಮೊದಲ ಬಾರಿಗೆ ಒಂದಾಗಿ ಸಿನಿಮಾ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ