ಪಿ ಪದ್ಮಜಾ 
ಸಿನಿಮಾ ಸುದ್ದಿ

ಮಗ, ಪತಿಯನ್ನು ಬಿಟ್ಟು ಒಬ್ಬಂಟಿಯಾಗಿದ್ದ ನಟಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊನೆಯದಾಗಿ ವಿಡಿಯೋ ಕಾಲ್!

ಸಿನಿಮಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಲ್ಲಿ ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಅರ್ಧದಲ್ಲೇ ಅವರ ಆಶಾ ಗೋಪುರ ಕುಸಿಯುತ್ತದೆ. ಇನ್ನು ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ 23 ವರ್ಷದ ಉದಯೋನ್ಮುಖ ನಟಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಚೆನ್ನೈ: ಸಿನಿಮಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಲ್ಲಿ ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಅರ್ಧದಲ್ಲೇ ಅವರ ಆಶಾ ಗೋಪುರ ಕುಸಿಯುತ್ತದೆ. ಇನ್ನು ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ 23 ವರ್ಷದ ಉದಯೋನ್ಮುಖ ನಟಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

23 ವರ್ಷದ ತಮಿಳು ನಟಿ ಪಿ ಪದ್ಮಜಾ ಅವರ ಶವ ತಿರುವೊಟ್ಟಿಯೂರ್ ಅವರ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ಪದ್ಮಜಾ ಅವರು ಕಳೆದ ಒಂದು ತಿಂಗಳಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು. 

ಪದ್ಮಜಾ ಅವರು 25 ವರ್ಷದ ಪವನ್ ಎಂಬುವರ ಜೊತೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ನಟಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇನ್ನು ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದು ವಾರಾಂತ್ಯದಲ್ಲಿ ಭೇಟಿ ಮಾಡುತ್ತಿದ್ದರು. ಪದ್ಮಜಾರಿಂದ ದೂರವಾಗಿದ್ದ ಪವನ್ ಆಂಧ್ರಪ್ರದೇಶಕ್ಕೆ ಶಿಫ್ಟ್ ಆಗಿದ್ದರು. 

ಇನ್ನು ಸಾವಿಗೂ ಮುನ್ನ ಪದ್ಮಜಾ ಅವರು ಸಹೋದರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ಸಮಯದಲ್ಲಿ ಸಹೋದರಿಗೆ ಆರ್ಥಿಕ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಳು. ಇದರ ಜೊತೆಗೆ ನನಗೆ ಯಾವುದೇ ಸಿನಿಮಾ ಮತ್ತು ಧಾರಾವಾಹಿಯಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 

ಎರಡು ದಿನಗಳಿಂದ ಮನೆ ಮುಚ್ಚಿದ್ದನ್ನು ಗಮನಿಸಿದ ಮನೆ ಮಾಲೀಕರು ಎಸ್ ಕಾಶಿನಾಥನ್ ಅನುಮಾನಗೊಂಡು ತಿರುವೊಟ್ಟಿಯೂರ್ ಪೊಲೀಸರಿಗೆ ಫೋನ್ ಮಾಡಿದ್ದರು. ಸ್ಥಳಕ್ಕೆ ಆಗಮನಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಪದ್ಮಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?