ಸಿನಿಮಾ ಸುದ್ದಿ

'ಕಿರುತೆರೆಗೆ ಬಂದಿದ್ದು ಆಕಸ್ಮಿಕ, ಸಿನೆಮಾ ಹೀರೋ ಆಗಬೇಕೆಂದು ಕನಸು ಕಂಡವನು ನಾನು': ರಕ್ಷ್ 

ರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.


ನಟನೆಗೆ ಕಾಲಿಡುವಾಗಲೇ ಸಿನಿಮಾ ಹೀರೋ ಆಗಬೇಕೆಂದು ಆಸೆಪಟ್ಟವನು ನಾನು. ಧಾರವಾಹಿ ನನಗೆ ಇಷ್ಟವಿರಲಿಲ್ಲ, ಆಕಸ್ಮಿಕವಾಗಿ ಬಂದು ಸೇರಿದೆ, ಹೆಸರು ತಂದುಕೊಟ್ಟಿತು. ಸಿನಿಮಾಕ್ಕೆ ತಡವಾಗಿ ಎಂಟ್ರಿ ಕೊಟ್ಟೆ ಎನ್ನುತ್ತಾರೆ ರಕ್ಷ್. 


ನರಗುಂದ ಬಂಡಾಯ ಚಿತ್ರ ನಾಳೆ ತೆರೆಗೆ ಬರುತ್ತಿದೆ. ''ನನ್ನ ಕೈಯಲ್ಲಿ 6 ಚಿತ್ರಗಳಿವೆ. ಆದರೆ ಮೂರು ಚಿತ್ರಗಳು ಅರ್ಧಕ್ಕೆ ನಿಂತುಹೋಗಿವೆ. ಇನ್ನು ಮೂರು ಬಿಡುಗಡೆಯಾಗಬೇಕಿದೆ. ರಂಗಭೂಮಿ ಕಲಾವಿದನಾಗಿ ನಟನೆಗೆ ಪಾದಾರ್ಪಣೆ ಮಾಡಿ ಪ್ರತಿಕ್ರಿಯೆ ತಂಡದಲ್ಲಿ 9 ವರ್ಷ ಕೆಲಸ ಮಾಡಿ ಧಾರವಾಹಿ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಹೋಗಿ ನಂತರ ಹೀರೋ ಆಗಬೇಕೆಂಬ ಕನಸು ನರಗುಂದ ಬಂಡಾಯ ಮೂಲಕ ಕನಸಾಗಿದೆ'' ಎಂದರು.

ರಂಗಭೂಮಿಯಲ್ಲಿ ರಕ್ಷ್ ಅವರ ಅಭಿನಯ ನೋಡಿ ರಾಮ್ಜಿಯವರ ಗಮನ ಸೆಳೆದು ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಅವಕಾಶ ಸಿಕ್ಕಿತಂತೆ.

ನಾಗೇಂದ್ರ ಮಾಗಡಿ ನಿರ್ದೇಶನದ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಜೀವನಾಧಾರಿತ 1980ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ರೈತರ ದಂಗೆಯನ್ನಾಧರಿಸಿ ಮಾಡಿದ ಚಿತ್ರ ನರಗುಂದ ಬಂಡಾಯವಾಗಿದೆ. ಹುಬ್ಬಳ್ಳಿಯಿಂದ 80 ಕಿಲೋ ಮೀಟರ್ ದೂರದಲ್ಲಿರುವ ನರಗುಂದ ರೈತರ ಕ್ರಾಂತಿಕಾರಿ ಹೋರಾಟಗಳಿಗೆ ಜನಪ್ರಿಯ. 

ನರಗುಂದ ಬಂಡಾಯ ಚಿತ್ರಕ್ಕೆ ಶೇಖರ್ ಯಲುವಿಗಿ ಮತ್ತು ಸಿದ್ದೇಶ್ ವಿರಾಠಮಠ ಬಂಡವಾಳ ಹಾಕಿದ್ದಾರೆ. ರಕ್ಷ್ ಗೆ ನಾಯಕಿಯಾಗಿ ಶುಭಾ ಪೂಂಜಾ ನಟಿಸಿದ್ದಾರೆ. ಧರ್ಮ ವಿಶ್ ಅವರ ಸಂಗೀತ ಮತ್ತು ಛಾಯಾಗ್ರಹಣ ಆರ್ ಗಿರಿಯವರದ್ದಿದೆ. ಸಾಧು ಕೋಕಿಲಾ, ಅವಿನಾಶ್, ಭವ್ಯ, ರವಿ ಚೇತನ ಮತ್ತು ನೀನಾಸಂ ಅಶ್ವಥ್ ಪ್ರಮುಖ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT