ಸಿನಿಮಾ ಸುದ್ದಿ

'ಒಂದು ಗಂಟೆಯ ಕಥೆ' ಯಲ್ಲಿ 135 ಕಲಾವಿದರ ಸಮಾಗಮ

Shilpa D

ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ ಆಧರಿಸಿ ರಾಘವ ದ್ವಾರ್ಕಿ ನಿರ್ದೇಶನದ ಒಂದು ಗಂಟೆಯ ಕಥೆ ಸಿನಿಮಾ ಹಲವು ವಿಚಾರಗಳಿಂದ ಸುದ್ದಿ ಮಾಡಿತ್ತು. 

ನಿರ್ಭಯಾ ಮತ್ತು ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಪ್ರಕರಣಗಳಿಗೆ ಇದು ಉತ್ತರ ಎಂದು ನಿರ್ದೇಶಕರ ಅಭಿಪ್ರಾಯ. 

ಇದು ಮನರಂಜನೆಯ ರೀತಿಯಲ್ಲಿ ಹೇಳುವ ಗಂಭೀರ ವಿಷಯವಾಗಿದೆ ಮತ್ತು ಈ ಸಿನಿಮಾ ಬಲವಾದ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ ಎಂದು ನಿರ್ದೇಶಕ ದ್ವಾರ್ಕಿ ಹೇಳುತ್ತಾರೆ.

ಗುನ್ನ, ಶಂಭೋ, ಮತ್ತೆ ಮುಂಗಾರು ಸೇರಿದಂತೆ ಕನ್ನಡ, ತೆಲುಗು ಮತ್ತು ತಮಿಳು  ಸಿನಿಮಾ ನಿರ್ದೇಶಿಸಿರುವ ರಾಘವ ದ್ವಾರ್ಕಿ, ಈ ಸಿನಿಮಾದಲ್ಲಿ 135 ಕಲಾವಿದರನ್ನು ಒಟ್ಟಿಗೆ ತಂದಿದ್ದಾರೆ.

ಅಜಯ್ ನಾಯಕನಾಗಿರುವ ಈ ಸಿನಿಮಾದಲ್ಲಿ ಶಹನಾಯ ಮತ್ತು ಸ್ವಾತಿ ಶರ್ಮಾ ನಾಯಕಿಯರಾಗಿದ್ದಾರೆ,  ಚಿದಾನಂದ , ಪ್ರಶಾಂತ್ ಸಿದ್ದಿ, ಯಶವಂತ ಸರ್ ದೇಶಪಾಂಡೆ. ಪ್ರಕಾಶ್ ಕೆ ಥುಮಿನಾಡು, ಸಿಲ್ಲಿ ಲಲ್ಲಿ ಆನಂದ್ ಮತ್ತು ನಾಗೇಂದ್ರ ಶಾ ಪ್ರಮುಖ ಪಾತ್ರದಲ್ಲಿದ್ದಾರೆ.

ಚಿತ್ರದ ಹಾಡುಗಳಿಗೆ ಡೆನ್ನಿಸ್‌ ವಲ್ಲಭವ್‌ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಸೂರ್ಯಕಾಂತ್‌ ಛಾಯಾಗ್ರಹಣ, ಗಣೇಶ್‌ ಮಲ್ಲಯ್ಯ ಸಂಕಲನವಿದೆ.  ಏಪ್ರಿಲ್  24 ರಂದು ಸಿನಿಮಾ ರಿಲೀಸ್ ಆಗಲಿದೆ.
 

SCROLL FOR NEXT