ಸಂತೋಷ್ ಆನಂದ್ ರಾಮ್ 
ಸಿನಿಮಾ ಸುದ್ದಿ

ಕೊರೋನಾ ಬಿಕ್ಕಟ್ಟು ತಿಳಿಯಾದ ನಂತರವೇ 'ಯುವರತ್ನ' ಹಾಡು, ಟ್ರೈಲರ್ ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್

ಕೋವಿಡ್ -19 ಕಾರಣ ಜಾರಿಯಲ್ಲಿರುವ ಕಠಿಣ  ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರವೇ ಯುವರತ್ನದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.

ಕೋವಿಡ್ -19 ಕಾರಣ ಜಾರಿಯಲ್ಲಿರುವ ಕಠಿಣ  ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರವೇ ಯುವರತ್ನದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.ವೀಡಿಯೊ ಸಂದೇಶದಲ್ಲಿ, ನಿರ್ದೇಶಕರು ಮೇ ದಿನದಂದು ಪ್ರತಿಯೊಬ್ಬ ಕಾರ್ಮಿಕರಿಗೆ  ತಮ್ಮ ಶುಭಾಶಯಗಳನ್ನು ತಿಳಿಸಿದ ನಿರ್ದೇಶಕ  ಪವರ್ ಸ್ಟಾರ್‌ ಪುನೀತ್  ಚಿತ್ರದ ಒಂದು ಲುಕ್ ಪಡೆಯಲು ಕಾಯುತ್ತಿರುವ  ಅವರ ಎಲ್ಲ ಅಭಿಮಾನಿಗಳಿಗೆ ಸಂದೇಶವನ್ನು ಸಹ ನೀಡಿದ್ದಾರೆ

ಬಹುನಿರೀಕ್ಷಿತ ಚಿತ್ರ ಯುವರತ್ನ ನಟ-ನಿರ್ದೇಶಕರ ಜೋಡಿಯ ಎರಡನೇ ಕಾಣಿಕೆಯಾಗಿದೆ. ಈ ಹಿಂದೆ ಈ ಜೋಡಿ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಜತೆಯಾಗಿ ರಾಜಕುಮಾರ ಚಿತ್ರ ನಿರ್ಮಿಸಿದ್ದರು. "ಹಾಡುಗಳು ಮತ್ತು ಟ್ರೈಲರ್  ಬಗ್ಗೆ ಸಾಕಷ್ಟು ಕುತೂಹಲವಿದೆ. ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿದೆ. ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ" ಎಂದು ನಿರ್ದೇಶಕ ಹೇಳಿದ್ದಾರೆ. ರೆ, "ಸಂಗೀತ ನಿರ್ದೇಶಕ ಎಸ್ ತಮನ್ ಯುವರತ್ನಕ್ಕಾಗಿ ತಮ್ಮ ಐದು ಅತ್ಯುತ್ತಮ  ಹಾಡುಗಳ ಸಂಯೋಜನೆ ಮಾಡಿದ್ದಾರೆ.ಅವೆಲ್ಲವನ್ನೂ ಆದಷ್ಟು ಶೀಘ್ರ ರಿಲೀಸ್ ಆಗಲಿದೆ. ತಂಡವು ಖಂಡಿತವಾಗಿಯೂ ನಿಯಮಿತ ಯೋಜನೆಯೊಂದಿಗೆ ಕೆಲಸ ಮಾಡುತ್ತಿದೆ.  ” ಚಿತ್ರ ಬಿಡುಗಡೆಯಾದಾಗ ವೀಕ್ಷಕರು ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ  ವೀಕ್ಷಿಸಲಿದ್ದಾರೆ ಎಂದು ನಿರ್ದೇಶಕರ ಆಶಯ.

ಸದ್ಯಕ್ಕೆ, ಈ ಲಾಕ್‌ಡೌನ್ ಅವಧಿಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ. ಯುವರತ್ನ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸಿದ್ದು, ಬಹುತಾರಾಂಗಣವನ್ನು ಒಳಗೊಂಡಿದೆ.

ಈ ಚಿತ್ರದ ಮೂಲಕ ಸಯೆಷಾ  ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಧನಂಜಯ್ ಅಭಿನಯವಿದೆ. ತಾರಾಗಣದಲ್ಲಿ ದಿಗಂತ್, ಸೋನು ಗೌಡ, ಪ್ರಕಾಶ್ ರೈಮತ್ತು ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯುವರತ್ನಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಹಾಗೂ ಜ್ಞಾನೇಶ್ ಬಿ ಮಾತಡ್ ಸಂಕಲನವಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT