ಸಿನಿಮಾ ಸುದ್ದಿ

ಸಿನಿಪ್ರೇಕ್ಷಕರಿಗೆ ಹಾಸ್ಯದ ಔತಣ ನೀಡಲಿರೋ ಡ್ಯಾನಿಶ್, ಪನ್ನಗ ಜೋಡಿಯ 'ಫ್ರೆಂಚ್ ಬಿರಿಯಾನಿ'

Raghavendra Adiga

ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ ಕೊನೆಯ ಹಂತದಲ್ಲಿರುವ ಫ್ರೆಂಚ್ ಬಿರಿಯಾನಿ, ಪಿಆರ್‌ಕೆ ಪ್ರೊಡಕ್ಷನ್‌ನಿಂದ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ಬಿಡುಗಡೆಯಾಗುವ ಮೊದಲ ಚಿತ್ರವಾಗಿದೆ..

ಫ್ರೆಂಚ್ ಬಿರಿಯಾನಿ ಪನ್ನಗ ಭರಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇದು ಶಿವಾಜಿನಗರ ಆಟೋ ಡ್ರೈವರ್ ಜತೆಗೆ ಫ್ರೆಂಚ್ ವಲಸಿಗನ 3 ದಿನಗಳ ಪ್ರಯಾಣದ ಕಥೆ ಹೊಂದಿದೆ. ಸಾಲ್ ಯೂಸುಫ್ ಮತ್ತು ಡ್ಯಾನಿಶ್ ಸೈತ್ ಈ ಪಾತ್ರಗಳನ್ನು ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ದಿಶಾ ಮದನ್, ನಾಗಭೂಷಣ್, ಸಿಂಧು ಶ್ರೀನಿವಾಸಮೂರ್ತಿ ಕೂಡ ನಟಿಸಿದ್ದಾರೆ. ಪನ್ನಗ ಅವರ ವೈಯಕ್ತಿಕ ಅನುಭವವನ್ನು ಆಧರಿಸಿದ ಈ ಕಥೆಯನ್ನು ಅವಿನಾಶ್ ಬಾಳಕೇಳ  ಬರೆದಿದ್ದರೆ, ಸಂಗೀತವು ವಾಸುಕಿ ವೈಭವ್ ಅವರದಾಗಿದೆ. ಕಾರ್ತಿಕ್ ಛಾಯಾಗ್ರಹಣ ನೆರವೇರಿಸಿದ್ದಾರೆ.

"ಪ್ರಸ್ತುತ ಪ್ರೊಡಕ್ಷನ್ ಹೌಸ್ ಮತ್ತು ಸ್ಟ್ರೀಮಿಂಗ್ ಚಾನೆಲ್ ನಡುವೆ ಚರ್ಚೆಗಳು ನಡೆಯುತ್ತಿವೆ, ಮತ್ತು ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ನಾವು ಜೂನ್‌ನಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ. " ಎಂದು ನಿರ್ದೇಶಕರು ಹೇಳಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ ವೀಕ್ಷಕರು ಹೆಚ್ಚುತ್ತಿರುವ ಕಾರಣ . "ಈ ರೀತಿಯ ಸಾಂಕ್ರಾಮಿಕ ಸಮಯದಲ್ಲಿ ಜನರು ಮನರಂಜನೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಅಲ್ಲದೆ ಈ ವೇಳೆ ಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರನ್ನು ತಲುಪಲು ಉತ್ತಮ ಮಾರ್ಗವಾಗಿದೆ. ಮುಖ್ಯವಾಗಿ, ಸ್ಟ್ರೀಮಿಂಗ್ ಚಾನೆಲ್‌ಗಳೊಂದಿಗೆ ಸಂಬಂಧ ಹೊಂದುವ ಮೂಲಕ ಪ್ರೊಡಕ್ಷನ್ ಸಂಸ್ಥೆಗಳು ಲಾಭ ಪಡೆಯುತ್ತಿವೆ. ಆದ್ದರಿಂದ ಇದು ಅವರೆಲ್ಲರಿಗೂ ಗೆಲುವಿನ ಹಾದಿಯಾಗಿದೆ. "ಪನ್ನಗ ಹೇಳಿದ್ದಾರೆ. ಸಣ್ಣ ಬಜೆಟ್‌ನೊಂದಿಗೆ ನಿರ್ಮಿಸಲಾದ ಚಲನಚಿತ್ರಗಳಿಗೆ ಇದು ಅತ್ಯುತ್ತಮ ಮಾಧ್ಯಮವಾಗಿದೆ. ತಮ್ಮ ತಂದೆ ಟಿ.ಎಸ್.ನಾಗಭಾರಣ ಅವರ ಕೆಳಗೆ ನಿರ್ದೇಶನ ಕೆಲಸ ಮಾಡಿದ ಪನ್ನಗ ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.  ಫ್ರೆಂಚ್ ಬಿರಿಯಾನಿ ಅವರ ಎರಡನೇ ಚಿತ್ರವಾಗಿದೆ. ಹೊಸ ವಿಷಯದೊಂದಿಗೆ, ನಾವು ಹೆಚ್ಚಿನ ಸಮಯದವರೆಗೆ ಥಿಯೇಟರ್ ಪರದೆಗಳನ್ನು ಹಿಡಿದಿಡಲು ಸಾಧ್ಯವಿಲ್ಲ ಅದೇ . OTT ಯಲ್ಲಿ ಚಲನಚಿತ್ರಬಿಡುಗಡೆ ಮಾಡಿದ್ದಾದರೆ ಯಾರಾದರೂ ಯಾವಾಗ ಬೇಕಾದರೂ ಬಂದು ವೀಕ್ಷಿಸಬಹುದು, ”ಎಂದು ಅವರು ಹೇಳುತ್ತಾರೆ.

SCROLL FOR NEXT