ತಮನ್ನಾ ಭಾಟಿಯಾ ಮತ್ತು ಅಬ್ದುಲ್ ರಜಾಕ್ 
ಸಿನಿಮಾ ಸುದ್ದಿ

ಸಾನಿಯಾ ನಂತರ ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಮನ್ನಾ ಭಾಟಿಯಾ ಮದುವೆ: ನಟಿ ಹೇಳಿದ್ದೇನು?

ಫೋಟೋ ಒಂದರಲ್ಲಿ ತಮನ್ನಾ ಜೊತೆಗೆ ಅಬ್ದುಲ್ ರಜಾಕ್ ಕಾಣಿಸಿಕೊಂಡೇ ತಡ ಈ ಸುದ್ದಿಗೆ ಸುಣ್ಣ ಬಣ್ಣ ಬಳಿದು ಗಾಸಿಪ್ ಪ್ರಿಯರು ಮದುವೆ ಹಣೆಪಟ್ಟಿ ಕಟ್ಟಿದರು. ಈ ಫೋಟೋವನ್ನು ಆಭರಣದ ಮಳಿಗೆಯಲ್ಲಿ ತೆಗೆಯಲಾಗಿದ್ದು ಇಬ್ಬರೂ ಮದುವೆಗೆ ಒಡವೆ ಖರೀದಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಯಿತು.

ಫೋಟೋ ಒಂದರಲ್ಲಿ ತಮನ್ನಾ ಜೊತೆಗೆ ಅಬ್ದುಲ್ ರಜಾಕ್ ಕಾಣಿಸಿಕೊಂಡೇ ತಡ ಈ ಸುದ್ದಿಗೆ ಸುಣ್ಣ ಬಣ್ಣ ಬಳಿದು ಗಾಸಿಪ್ ಪ್ರಿಯರು ಮದುವೆ ಹಣೆಪಟ್ಟಿ ಕಟ್ಟಿದರು. ಈ ಫೋಟೋವನ್ನು ಆಭರಣದ ಮಳಿಗೆಯಲ್ಲಿ ತೆಗೆಯಲಾಗಿದ್ದು ಇಬ್ಬರೂ ಮದುವೆಗೆ ಒಡವೆ ಖರೀದಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಯಿತು.

ಇದಕ್ಕೂ ಮುನ್ನ ಟೆನ್ನಿಸ್  ಸೆನ್ಸೇಷನ್ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಂಡು ದಾಂಪತ್ಯ ಜೀವನಕ್ಕೂ ಅಡಿಯಿಟ್ಟರು. ಇದೇ ರೀತಿ ತಮನ್ನಾ ಹಾಗೂ ಅಬ್ದುಲ್ ರಜಾಕ್ ಸಹ ಮದೆಯಾಗಲಿದ್ದಾರೆ. ಇಬ್ಬರೂ ಸಂಸಾರ ನೌಕೆ ಹತ್ತಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ

ವಿಶೇಷ ಎಂದರೆ ಈಗಾಗಲೆ ಆಯೇಷಾರನ್ನು ಮದುವೆಯಾಗಿರುವ ಅಬ್ದುಲ್ ರಜಾಕ್‌ಗೆ ಮಕ್ಕಳೂ ಇದ್ದಾರೆ. ಈಗ ಈ ಗಾಸಿಪ್ ಸುದ್ದಿಯಿಂದ ಪಾಕಿಸ್ತಾನದ ಕ್ರಿಕೆಟ್ ಪ್ರಿಯರೂ ಶಾಕ್ ಆಗಿದ್ದಾರೆ.

ಸತ್ಯ ಏನೆಂದರೆ ಇದು ಹಳೇ ಫೋಟೋ. ಇಬರಿಬ್ಬರೂ ಆಭರಣ ಮಳಿಗೆಯೊಂದನ್ನು ಉದ್ಘಾಟಿಸಲು ಬಂದಾಗ ತೆಗೆದಂತಹ ಫೋಟೋ. ಹಳೇ ಫೋಟೋವನ್ನೇ ಇಟ್ಟುಕೊಂಡ ಗಾಸಿಪ್ ಪ್ರಿಯರು ಈಗ ಅದಕ್ಕೆ ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದಾರೆ. ಇದೆಲ್ಲಾ ತಳಬುಡ ಇಲ್ಲದ ಗಾಸಿಪ್‌ಗಳು ಎಂಬುದನ್ನು ಗಮನಿಸಬೇಕು. ಈ ಹಿಂದೊಮ್ಮೆ ತಮನ್ನಾ ಅವರು ಯುಎಸ್ ಮೂಲದ ವೈದ್ಯರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಈ ಬಗ್ಗೆ ಗರಂ ಆಗಿದ್ದ ನಟಿ, “ಒಂದು ದಿನ ಡಾಕ್ಟರ್ ಅಂತೀರ, ಇನ್ನೊಂದು ದಿನ ಆಕ್ಟರ್, ಮಗದೊಂದು ದಿನ ಕ್ರಿಕೆಟರ್ ಅಂತೀರ. ಈ ಎಲ್ಲಾ ಗಾಸಿಪ್ ಸುದ್ದಿಗಳನ್ನು ಕೇಳುತ್ತಿದ್ದರೆ. ನಾನೇನಾದರೂ ಗಂಡನನ್ನು ಖರೀದಿಸಲು ಹೋಗುತ್ತಿದ್ದೀನಾ? ಲವ್ ಬಗ್ಗೆ ನನಗೆ ನಂಬಿಕೆ ಇದೆ. ಆದರೆ ತಳಬುಡ ಇಲ್ಲದ ಸುದ್ದಿಗಳು ನನ್ನ ವೈಯಕ್ತಿಕ ಜೀವನದಲ್ಲಿ ತಳಮಳ ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT