ಮನು ರವಿಚಂದ್ರನ್ 
ಸಿನಿಮಾ ಸುದ್ದಿ

ಚಿಲ್ಲಂ ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಮನು ರವಿಚಂದ್ರನ್

ಮನು ಕಲ್ಯಾಡಿ ನಿರ್ದೇಶನದ ಪ್ರಾರಂಭ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನಟ ಮನು ರವಿಚಂದ್ರನ್ ಅವರು ಮುಗಿಲ್‌ಪೇಟೆಯ ಚಿತ್ರೀಕರಣ ಪುನರಾರಂಭಿಸಲು ಕಾಯುತ್ತಿದ್ದಾರೆ. ಇದರ ಜೊತೆಗೆ ಇದೇ ವರ್ಷದಲ್ಲಿ ಚಿಲ್ಲಂ ಚಿತ್ರದ ಕೆಲಸವನ್ನೂ ಪ್ರಾರಂಭಿಸಲಿದ್ದಾರೆ.

ಮನು ಕಲ್ಯಾಡಿ ನಿರ್ದೇಶನದ ಪ್ರಾರಂಭ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನಟ ಮನು ರವಿಚಂದ್ರನ್ ಅವರು ಮುಗಿಲ್‌ಪೇಟೆಯ ಚಿತ್ರೀಕರಣ ಪುನರಾರಂಭಿಸಲು ಕಾಯುತ್ತಿದ್ದಾರೆ. ಇದರ ಜೊತೆಗೆ ಇದೇ ವರ್ಷದಲ್ಲಿ ಚಿಲ್ಲಂ ಚಿತ್ರದ ಕೆಲಸವನ್ನೂ ಪ್ರಾರಂಭಿಸಲಿದ್ದಾರೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ 2018ರಲ್ಲಿ ಪ್ರಾರಂಭವಾಗಿ 10 ದಿನಗಳ ಚಿತ್ರೀಕರಣದ ನಂತರ  ಮೊಟಕುಗೊಂಡಿತ್ತು.

ಚಿಲ್ಲಂ ಒಂದು ಆಸಕ್ತಿದಾಯಕ ವಿಷಯವಾಗಿದೆ. ಇದು ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಿದ ನಾಯಕನ ಚಿತ್ರವಾಗಿದೆ. ಅದರಲ್ಲಿ ನನ್ನನ್ನು ಕೆಟ್ಟ ಹುಡುಗ ಅವತಾರದಲ್ಲಿ ಚಿತ್ರಿಸಲಾಗುವುದು. ಇದು ನಾನು ಅನ್ವೇಷಿಸಲು ಬಯಸುವ ಒಂದು ವಿಶಿಷ್ಟ ಪಾತ್ರವಾಗಿರುತ್ತದೆ, ಮತ್ತು ಬದಲಾವಣೆ ಆಸಕ್ತಿದಾಯಕವಾಗಿದೆ. ಹೀಗಾಗಿ ನಾನು ಈ ಚಿತ್ರವನ್ನು ಬಿಡುವುದಿಲ್ಲ ಎಂದು ಮನು ರವಿಚಂದ್ರನ್ ಹೇಳಿದ್ದಾರೆ.

ಚಿಲ್ಲಂ ಚಿತ್ರಕ್ಕೂ ಮುನ್ನ ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ ಅಂದುಕೊಂಡತೆ ಚಿತ್ರೀಕರಣ ಮುಂದುವರೆಯಲಿಲ್ಲ. ಒಂದು ವಾರವಷ್ಟೆ ಚಿತ್ರೀಕರಣ ನಡೆದಿತ್ತು.  ಚಿತ್ರಕ್ಕೆ ಹೆಚ್ಚಿನ ಬಂಡವಾಳ ಬೇಕಿತ್ತು. ಆದರೆ ಭಾರೀ ಬಜೆಟ್ ಗೆ ನಿರ್ಬಂಧವಿತ್ತು. ಈ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನನಗೆ ಹೊಸ ನಿರ್ಮಾಪಕರು ಸಿಕ್ಕಿದ್ದಾರೆ. ಅವರೊಂದಿಗೆ ನಾನು ದೂರವಾಣಿ ಚರ್ಚೆ ನಡೆಸಿದ್ದೇನೆ. ನಿರ್ದೇಶಕರನ್ನು ಶೀಘ್ರದಲ್ಲೇ ಭೇಟಿಯಾಗುತ್ತೇನೆ ಮತ್ತು ಚಿಲ್ಲಂಗಾಗಿ ಶೆಡ್ಯೂಲ್ ರೂಪಿಸುತ್ತೇನೆ ಎಂದು ಮನು ವಿವರಿಸಿದ್ದಾರೆ. ಜೊತೆಗೆ ಚಿಲ್ಲಮ್‌ಗೆ ಕನಿಷ್ಠ 120 ದಿನಗಳ ಶೂಟಿಂಗ್ ವೇಳಾಪಟ್ಟಿ ಬೇಕಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ