ಸಿನಿಮಾ ಸುದ್ದಿ

ಒಂದು ಕಮರ್ಷಿಯಲ್ ಚಿತ್ರಕ್ಕೆ ಯೋಗರಾಜ್ ಭಟ್, ಶಶಾಂಕ್ ಸೇರಿ ಐವರ ನಿರ್ದೇಶನ!

ಕನ್ನಡ ಚಿತ್ರರಂಗದ ಐದು ಪ್ರಸಿದ್ಧ ನಿರ್ದೇಶಕರು - ಯೋಗರಾಜ್ ಭಟ್, ಕೆ ಎಂ ಚೈತನ್ಯ, ಶಶಾಂಕ್, ಜಯತೀರ್ಥ ಮತ್ತು ಪವನ್ ಕುಮಾರ್ ಒಂದೇ ಚಿತ್ರಕ್ಕಾಗಿ ಒಟ್ಟಾಗುತ್ತಿದ್ದಾರೆ.

ಕನ್ನಡ  ಚಿತ್ರರಂಗದ  ಐದು ಪ್ರಸಿದ್ಧ ನಿರ್ದೇಶಕರು - ಯೋಗರಾಜ್ ಭಟ್, ಕೆ ಎಂ ಚೈತನ್ಯ, ಶಶಾಂಕ್, ಜಯತೀರ್ಥ ಮತ್ತು ಪವನ್ ಕುಮಾರ್ ಒಂದೇ ಚಿತ್ರಕ್ಕಾಗಿ ಒಟ್ಟಾಗುತ್ತಿದ್ದಾರೆ.ಇದು ಸ್ಯಾಂಡಲ್‌ವುಡ್‌ನಲ್ಲಿ ಈ ರೀತಿಯ ಮೊದಲ ಪ್ರಯೋಗವಾಗಿರಲಿದೆ.  ನಿರ್ದೇಶಕರು ಶುದ್ದ ಕಮರ್ಷಿಯಲ್ ಎಂಟರ್ಟೈನರ್ ಗಾಗಿ ಒಂದಾಗುತ್ತಿದ್ದಾರೆನ್ನುವುದು ಇನ್ನೊಂದು ಗಮನಾರ್ಹ ಅಂಶ.

ಇದು ಲಾಕ್‌ಡೌನ್ ಅವಧಿಯಲ್ಲಿ ಚರ್ಚಿಸಲಾದ ಯೋಜನೆ ಎಂದು ಹೇಳಲಾಗಿದ್ದು ಮೂಲವೊಂದರ ಪ್ರಕಾರ, ಸಿದ್ಧತೆ ಕಾರ್ಯಗಳು ನಡೆಯುತ್ತಿದೆ., ನಿರ್ದೇಶಕರು ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭಿಸಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಅದನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಚಿತ್ರ ನಿರ್ಮಾಪಕರು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡಲಿದ್ದು, ಅವರು ಚಿತ್ರದ ಕಥೆ, ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಗಳ ಬಗ್ಗೆ ಬಹಿರಂಗಪಡಿಸಲಿದ್ದಾರೆ.

ಬಾಲಿವುಡ್ ಮತ್ತು ತಮಿಳು ಚಲನಚಿತ್ರೋದ್ಯಮವು ಬೆಳ್ಳಿ ಪರದೆ ಅಥವಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಪ್ರಾಜೆಕ್ಟ್ ತಯಾರಿಸುವಲ್ಲಿಹಲವು ರ್ದೇಶಕರನ್ನು ಕರೆತರುವ ಪ್ರಯೋಗವನ್ನು ನಡೆಸುತ್ತಿದೆ. ಅದರಲ್ಲಿ ಇತ್ತೀಚಿನ ಉದಾಹರಣೆ  ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಶನ್ ಅವರು ತಮಿಳಿನ", ನವರಸ "ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

ಕಳೆದ ವರ್ಷ ಕನ್ನಡದಲ್ಲಿ "ಕಥಾ ಸಂಗಮ" ಚಿತ್ರ ತೆರೆಗೆ ಬಂದಿತ್ತು.ರಿಷಬ್ ಶೆಟ್ಟಿ ನೇತೃತ್ವದ ತಂಡ  ಏಳು ನಿರ್ದೇಶಕರನ್ನು ಮತ್ತು ಛಾಯಾಗ್ರಾಹಕರನ್ನು  ಸಂಗೀತ ನಿರ್ದೇಶಕರು ಸೇರಿ  ತಂತ್ರಜ್ಞರನ್ನು ಒಟ್ಟುಗೂಡಿಸಿತು. ಆದರೆ, ಈ ಬಾರಿ ಕನ್ನಡ ನಿರ್ದೇಶಕರು 2 ಗಂಟೆಗಳ ಮನರಂಜನೆಗಾಗಿ ಒಂದಾಗಿದ್ದಾರೆ.  ಇದು ಸಿನಿ ಪ್ರಿಯರ ಕುತೂಹಲವನ್ನು ಇಮ್ಮಡಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT