ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಟ ಹೆಚ್.ಜಿ. ಸೋಮಶೇಖರ ರಾವ್ ನಿಧನ

Raghavendra Adiga

ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಸೋಮಶೇಖರ ರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 

ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಶೇಖರ್ 1981ರಲ್ಲಿ ಚಿತ್ರೋದ್ಯಮ ಪ್ರವೇಶಿಸಿದ್ದರು. ಟಿಎಸ್ ರಂಗಾ ಅವರ "ಸಾವಿತ್ರಿ" ಇವರ ಮೊದಲ ಚಿತ್ರ. 

ರವೀ ನಿರ್ದೇಶನದ "ಮಿಥಿಲೆಯ ಸೀತೆಯರು" ಸೋಮಶೇಖರ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೆ ರವೀ ನಿರ್ದೇಶನದ "ಹರಕೆಯ ಕುರಿ",  ಚಿತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.
 

SCROLL FOR NEXT