ಯೋಗರಾಜ್ ಭಟ್ ಮತ್ತು ರವಿ ಬೆಳಗೆರೆ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಇದು ರವಿ ಬೆಳೆಗೆರೆ ಸಾವಲ್ಲ, ಹುಟ್ಟು: ಯೋಗರಾಜ್ ಭಟ್

ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು ಎಂದು ಸಾಹಿತಿ,ನಿರ್ದೇಶಕ ಯೋಗರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು ಎಂದು ಸಾಹಿತಿ, ನಿರ್ದೇಶಕ ಯೋಗರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರೀಷ್ಮಾ ಹಿಲ್ಸ್ ನ ರವಿಬೆಳಗೆರೆಯ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೊನ್ನೆವರೆಗೂ ಫೋನ್‍ ನಲ್ಲಿ ರವಿ ಬೆಳಗೆರೆಯೊಂದಿಗೆ ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಅನಾರೋಗ್ಯ ಕಾಡುತ್ತಲೇ ಇತ್ತು. ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಎಂದು ಹೊರಟುಬಿಟ್ಟಿದ್ದಾರೆನೋ ಅನ್ನಿಸುತ್ತಿದೆ ಎಂದು ಅವರು ಸಂತಾಪ ಸೂಚಿಸಿದರು.

ರವಿ ಬೆಳೆಗೆರೆ ಅವರು ನೆನಪು, ಬರಹಗಳೊಂದಿಗೆ ನಮ್ಮೊಂದಿಗಿದ್ದಾರೆ. ಅವರು ಸಂಗೀತ ಪ್ರಿಯರಾಗಿದ್ದು, ನನ್ನದು ಅವರದ್ದು ಅದ್ಭುತ ಸ್ನೇಹ ಎಂದರು.

ನನ್ನ ಚಿತ್ರ, ಹಾಡುಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ತುಂಬು ಜೀವನವನ್ನು ನಡೆಸಿದ್ದು, ಧೈರ್ಯಕ್ಕೆ ಮತ್ತೊಂದು ಹೆಸರು ಧೀಮಂತ ಪತ್ರಕರ್ತ ಎಂದರು.

ಎಲ್ಲಾ ಕಲೆಗಳನ್ನು ಮೋಹಿಸಿ ಬದುಕಿದ ಜೀವ ಅವರದ್ದು. ಕಳೆದ ವರ್ಷ ಕರಾವಳಿಯಲ್ಲಿ ನನಗೆ ಪ್ರಶಸ್ತಿ ನೀಡಿದ್ದರು. ಈಗ ಹೋಗಿ ಬನ್ನಿ ಎನ್ನುವುದು ಬಿಟ್ಟರೆ ಬೇರೆನಿಲ್ಲ ಎಂದು ಅವರು ಬೇಸರಿಂದ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್: 59ನೇ ಸಿಹೆಚ್ ಹೆಚ್ ಕೋರ್ಟ್ ಆದೇಶ ರದ್ದು!

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಭಾರೀ ಭದ್ರತಾಲೋಪ: ನಕಲಿ PMO ಅಧಿಕಾರಿ, ಗನ್ ಹೊಂದಿದ್ದ ಇಬ್ಬರ ಬಂಧನ!

ಯುಕ್ರೇನ್ ವಿರುದ್ಧದ ಯುದ್ಧ: ಭಾರತದ ಶಾಂತಿ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ- ರಷ್ಯಾ; ಆ.11 ರಂದು ಮೋದಿ-ಪುಟಿನ್ ದ್ವಿಪಕ್ಷೀಯ ಮಾತುಕತೆ

‘ನಮಗೆ ಸೇಡು ಬೇಡ, ನ್ಯಾಯ ಬೇಕು’: ಮಣಿಪುರ ಸಂಗೀತ ಶಿಕ್ಷಕನ ಪತ್ನಿ ಕಣ್ಣೀರು

ಚಿಕ್ಕಬಳ್ಳಾಪುರ: ಗಂಡನನ್ನು ಬಿಟ್ಟು ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಸಾವು; ಮೊಬೈಲ್ನೊಂದಿಗೆ ಪ್ರಿಯಕರ ಶಬ್ಬೀರ್ ಪರಾರಿ!