ದರ್ಶನ್ ಹಾಗೂ ಚಿತ್ರತಂಡ 
ಸಿನಿಮಾ ಸುದ್ದಿ

'ಆಕ್ಟ್-1978' ಸಿನಿಮಾ ನೋಡಿ: ಚಿತ್ರತಂಡಕ್ಕೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್!

‘ಆಕ್ಟ್-1978’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಲತುಂಬಿದ್ದಾರೆ.

ಬೆಂಗಳೂರು: ‘ಆಕ್ಟ್-1978’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಲತುಂಬಿದ್ದಾರೆ.

ಸಿನೆಮಾ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡಿರುವ ದಚ್ಚು,  ಆಕ್ಟ್-1978 ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ.‌ 

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿಬಂದಿರುವ 'ಆಕ್ಟ್ 1978' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನು ಗಮನಿಸಿದ ದರ್ಶನ್, ಇಡೀ ಚಿತ್ರತಂಡಕ್ಕೆ ಬಲ ತುಂಬಿದ್ದಾರೆ. ಸಿನಿಮಾವನ್ನು ನೋಡಿ ಎಂದು ತಮ್ಮ ಪರವಾಗಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

'ಆಕ್ಟ್ 1978 ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಬಂದಿದೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬ ಅಂಶವನ್ನಿಟ್ಟು ಕಥೆ ಮಾಡಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದ ಎಲ್ಲರೂ ಕಷ್ಟದಲ್ಲಿದ್ದರು. ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬನ್ನಿ ಸಿನಿಮಾ ನೋಡಿ'' ಎಂದು ವಿಡಿಯೋ ಮೂಲಕ ನಟ ದರ್ಶನ್ ವಿನಂತಿಸಿದ್ದಾರೆ.

ಡಿ ಬಾಸ್ ಆಹ್ವಾನದ ಮೆರೆಗೆ ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಛಾಯಾಗ್ರಾಹಕ ಸತ್ಯ ಹೆಗಡೆ ಸೇರಿದಂತೆ ಇತರೆ ತಂತ್ರಜ್ಞರು ಸೋಮವಾರ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್