ರಾಣಾ ದಗ್ಗುಬಾಟಿ 
ಸಿನಿಮಾ ಸುದ್ದಿ

ನಾನು ಸಾಯುವ ಸಾಧ್ಯತೆ ಶೇ. 30ರಷ್ಟು ಇತ್ತು ಎಂದ ದಕ್ಷಿಣ ಭಾರತದ ಖ್ಯಾತ ನಟ!

ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಮಗುವಾಗಿದ್ದಾಗಿನಿಂದಲೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಮಗುವಾಗಿದ್ದಾಗಿನಿಂದಲೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಟಾಕ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ರಾಣಾ "ಜೀವನ ವೇಗದಿಂದ ಮುನ್ನುಗ್ಗುತ್ತಿರುವಾಗ ಕೆಲವೊಮ್ಮೆ ದಿಢೀರ್ ವಿರಾಮ ಬಟನ್ ಇರುತ್ತದೆ. ಕಿಡ್ನಿ ವೈಫಲ್ಯವಾಗಿದೆ, ಶೇ. 70ರಷ್ಟು ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಸಾವು ಬರುವ ಸಾಧ್ಯತೆ ಶೇ.30ರಷ್ಟಿದೆ" ಎಂದು ಭಾವುಕರಾದರು.

ರಾಣಾ, ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ ಅವರೊಂದಿಗೆ ಸ್ಯಾಮ್ ಜಾಮ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಶೋನ ಎರಡನೇ ಎಪಿಸೋಡ್‌ನ ಟ್ರೈಲರ್ ರಾಣಾ ಅವರ ತೆರೆದ ನೋಟವನ್ನು ತೋರಿಸಿದೆ. ರಾಣಾ ಪರಿಚಯಿಸುವ ವೇದಿಕೆಯಲ್ಲಿ. ಸಮಂತಾ ತನ್ನ ಗತಕಾಲದ ಬಗ್ಗೆ ಒಂದು ಮಹತ್ವದ ಮಾಹಿತಿಯನ್ನು ತಿಳಿದುಕೊಂಡಿದ್ದಾರೆಂದು ರಾಣಾ ಸುಳಿವು ನೀಡುತ್ತಾರೆ.

"ಜೀವನವು ವೇಗವಾಗಿ ಸಾಗುತ್ತಿರುವಾಗ, ಇದ್ದಕ್ಕಿದ್ದಂತೆ ವಿರಾಮ ಬಟನ್ ಬರುತ್ತದೆ. ಬಿಪಿ ಇದೆ" ಎನ್ನುವ ನಟನ ಮಾತಿಗೆ ಸಮಂತಾ “ಜನರು ನಿಮ್ಮ ಸುತ್ತಲೂ ಮುಳುಗುತ್ತಿದ್ದರೂ, ನೀವು ಬಂಡೆಯಂತೆ ಇದ್ದೀರಿ. ನಾನು ಅದನ್ನು ಕಣ್ಣಾರೆ ನೋಡಿದ್ದೇನೆ ಮತ್ತು ಅದಕ್ಕಾಗಿಯೇ ಅವನು ನನಗೆ ಸೂಪರ್ ಹೀರೋ” ಎನ್ನುತ್ತಾರೆ.

ರಾಣಾ ಈ ವರ್ಷದ ಆರಂಭದಲ್ಲಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾದರು. ಜುಲೈನಲ್ಲಿ, ಅವರು ಕಿಡ್ನಿ ಕಸಿಗಾಗಿ ಯುನೈಟೆಡ್ ಸ್ಟೇಟ್ಸ್ ಗೆ ತೆರಳಿದ್ದಾರೆ ಎನ್ನುವ ಹಲವು ವದಂತಿಗಳು ಹರಿದಾಡಿದವು.  ಆದರೆ ಈ ವದಂತಿಗಳನ್ನು ಅಲ್ಲಗೆಳೆದಿದ್ದ ನಟ ರಾಣ ತಮ್ಮ ಮುಂದಿನ ಯೋಜನೆಯಾದ ಹಿರಣ್ಯಕಶಿಪುವಿನ ಬಗ್ಗೆ ಕೆಲಸ ಮಾಡಲು ಕೆಲವು ವಾರಗಳ ಕಾಲ ಯುಎಸ್ ನಲ್ಲಿದ್ದದ್ದಾಗಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel