ಸಿನಿಮಾ ಸುದ್ದಿ

ಧ್ರುವ ಸರ್ಜಾ 'ಪೊಗರು' ಚಿತ್ರದ ಹಿಂದಿ ಹಕ್ಕುಗಳು 7.2 ಕೋಟಿ ರೂ. ಗೆ ಮಾರಾಟ!

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ "ಪೊಗರು" ಪೋಸ್ಟರ್‌ಗಳು, ಟೀಸರ್ ಮತ್ತು ಜನಪ್ರಿಯ ಕರಾಬು ಹಾಡಿನೊಂದಿಗೆ ಸಖತ್ ಸೌಂಡ್ ಮಾಡುತ್ತಿದೆ.

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ "ಪೊಗರು" ಪೋಸ್ಟರ್‌ಗಳು, ಟೀಸರ್ ಮತ್ತು ಜನಪ್ರಿಯ ಕರಾಬು ಹಾಡಿನೊಂದಿಗೆ ಸಖತ್ ಸೌಂಡ್ ಮಾಡುತ್ತಿದೆ.  ನಿರ್ದೇಶಕ ನಂದ ಕಿಶೋರ್ ಅವರ ಮಾಸ್ ಕಮರ್ಷಿಯಲ್ ಎಂಟರ್ಟೈನರ್ ಆಗಿರುವ ಈ ಚಿತ್ರದ ಹಿಂದಿ ಹಕ್ಕುಗಳನ್ನು ಬಾಲಿವುಡ್ ನಿರ್ಮಾಪಕ ಆರ್ ಕೆ ದುಗ್ಗಲ್ ಅವರಿಗೆ 7.2 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟನ ಚಿತ್ರವೊಂದು ಇಷ್ಟು ದುಬಾರಿ ಮೊತ್ತಕ್ಕೆ ಹಿಂದಿ ಭಾಷೆಗೆ ಹೋಗುತ್ತಿರುವುದು ಅದು ಮೊದಲೆನ್ನಲಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಇದೀಗ ಹಿಂದಿ ಭಾಷೆಯಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಗುವುದು.

ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಚಲನಚಿತ್ರದ ಸಂಬಂಧ ಇಂತಹಾ ಬೆಳವಣಿಗೆ ನಡೆದಿರುವುದು ತಯಾರಕರಲ್ಲಿ ಖುಷಿ ಹೆಚ್ಚಿಸಿದೆ. ಬಿಕೆ ಗಂಗಾಧರ್ ನಿರ್ಮಿಸಿದ "ಪೊಗರು" ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಸೇರಿ ಬಹುತಾರಾಂಗಣವಿರುವ ಈ ಚಿತ್ರ ಡಿಸೆಂಬರ್ 25 ಅಥವಾ ಜನವರಿ 14ಕ್ಕೆ ತೆರೆ ಕಾಣಲಿದೆ.  ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ವಿಜಯ್ ಮಿಲ್ಟನ್ ಛಾಯಾಗ್ರಹಣ ಇದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?