ಸಿನಿಮಾ ಸುದ್ದಿ

ಕೃಷ್ಣ ಚೈತನ್ಯ ನಿರ್ಮಾಣದ ಹೊಸ ಚಿತ್ರ 'ಮನೆ ನಂಬರ್ 13' ಇಂದು ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಬಿಡುಗಡೆ

Raghavendra Adiga

ವಿವಿ ಕತಿರೆಸನ್ ನಿರ್ದೇಶನದ "ಮನೆ ನಂಬರ್ 13" ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗಿದ್ದು ಗುರುವಾರ (26 ನವೆಂಬರ್) ಅಮೆಜಾನ್ ಪ್ರೈಮ್ ವಿಡಿಯೋ ‌ನಲ್ಲಿ ಬಿಡುಗಡೆಯಾಗುತ್ತಿದೆ.

"6-5 = 2", "ಕರ್ವ" ಹಾಗೂ "ದಿಯಾ"ಮುಂತಾದ ಚಿತ್ರಗಳನ್ನು ನಿರ್ಮಿಸಿದ ಕೃಷ್ಣ ಚೈತನ್ಯ ಈ ಚಿತ್ರದ ನಿರ್ಮಾಪಕರಾಗಿದ್ದು ರಮಣ, ಸಂಜೀವ್, ಚೇತನ್ ಗಂಧರ್ವ, ಐಶ್ವರ್ಯ ಗೌಡ, ಪ್ರವೀಣ್ ಪ್ರೇಮ್ ಮತ್ತು ವರ್ಷಾ ಬೊಲ್ಲಮ್ಮ ಪ್ರಮುಖ ಪಾತ್ರಗಳಲ್ಲಿದ್ದಾರೆ.

“ಚಿತ್ರದ ಕಥೆ ಹಾಗೂ ನಿರ್ದೇಶಕರ ಬಗ್ಗೆ ನಟ ರಮಣ ನನಗೆ ಹೇಳಿದ್ದಾರೆ. ರೆ. ನನ್ನ ಹಿಂದಿನ ಹಿಟ್‌ಗಳು ಮತ್ತು ಹಾರರ್ ಪ್ರಕಾರಗಳಲ್ಲಿ ನಾನು ಕಂಡ ಯಶಸ್ಸು ನನಗೆ ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸುವಂತೆ ಮಾಡಿತು" ನಿರ್ಮಾಪಕ ಕೃಷ್ಣ ಚೈತನ್ಯ ಹೇಳಿದ್ದಾರೆ.

ಹೊಸಬರಿಗೆ ಅವಕಾಶ ಕೊಡಲು ಬಯಸುವ ಕೆಲವೇ ಕೆಲವು ನಿರ್ಮಾಪಕರಲ್ಲಿ ಕೃಷ್ಣ ಒಬ್ಬರು. 

"ಮನೆ ನಂಬರ್ 13" ಮಹತ್ವದ ವಿಷಯವೆಂದರೆ ನಿರ್ದೇಶಕರು ಪ್ರತಿ 10 ನಿಮಿಷಕ್ಕೆ ಒಂದು ತಿರುವನ್ನು ತಂದಿದ್ದಾರೆ. ಇದರಿಂಡ ವೀಕ್ಷಕರು ಏನೆಂದು ಭಾವಿಸುತ್ತಾರೆಯೋ ಹಾಗಾಗದೆ ಇನ್ನೊಂದೇ ರೀತಿಯದಾಗಲಿದೆ. ಇಡೀ ಚಿತ್ರವನ್ನು ಒಂದೇ ಮನೆಯಲ್ಲಿ ಚಿತ್ರೀಕರಿಸಿದ್ದು, ಕೇವಲ 10 ನಿಮಿಷಗಳನ್ನು ಕಾಡಿನಲ್ಲಿ ಶೂಟ್ ಮಾಡಲಾಗಿದೆ. "ಕೃಷ್ಣ ಅವರ ಪ್ರಕಾರ, 13 ನೇ ಸಂಖ್ಯೆಯ ಹೆಸರಿನ ಚಲನಚಿತ್ರಗಳು ಅದೃಷ್ಟ ಮತ್ತು ಹಿಟ್ ಆಗಿವೆ, ಮತ್ತು ಈ ಚಿತ್ರದ ವಿಷಯದಲ್ಲೂ ಹಾಗೆಯೇ ಆಗಲಿದೆ. ಎಂಬುದಾಗಿ ಅವರು ಆಶಿಸಿದ್ದಾರೆ" ಎಂದು ನಿರ್ದೇಶಕರು ಹೇಳುತ್ತಾರೆ

"ಮನೆ ನಂಬರ್ 13" ಗೆ ಸಂದೀಪ್ ಸದಾಶಿವ್ ಕ್ಯಾಮರಾ ಕೆಲಸವಿದೆ. ಎಎಂ ಶಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜೆಎಫ್ ಕ್ಯಾಸ್ಟ್ರೋ ಎಡಿಟಿಂಗ್ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ. 

SCROLL FOR NEXT