ಸಿನಿಮಾ ಸುದ್ದಿ

ನನ್ನ ಮಗು ಹೆಣ್ಣಾದರೆ ಏನು ಗತಿ? ನನಗೆ ತಾಯ್ತನ ಬೇಡ: ನಟಿ ಪಾರುಲ್ ಯಾದವ್ ಆತಂಕ

Lingaraj Badiger

ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪಾರುಲ್ ಯಾದವ್ ಅವರು, ತಾನು ತಾಯಿಯಾಗುವುದಿಲ್ಲ ಎಂದು ಹೇಳಿದ್ದಾರೆ.

‘ಹೆಣ್ತನದ ಸಾರವೇ ತಾಯ್ತನ. ಆದರೆ ನಾನಿಂದು ಅಮ್ಮನಾಗಲು ಬಯಸುತ್ತಿಲ್ಲ. ಒಂದು ಹುಡುಗಿಯಾಗಿ ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತಿದ್ದೇನೆ. ನಾನು ನಿಜಕ್ಕೂ ತಾಯ್ತನವನ್ನು ತ್ಯಜಿಸುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಗತಿ? ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ. ಹತ್ರಾಸ್‌ನಲ್ಲಿ ನಡೆದ ಭಯಂಕರ ಘಟನೆ ಇತ್ತೀಚೆಗಿನ ಉದಾಹರಣೆ' ಎಂದು ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.

ಕಾರಣಗಳು ಬೇರೆ ಇರಬಹುದು, ಆದರೆ ಸಂಕಷ್ಟ ಯಾವಾಗಲೂ ಹೆಣ್ಣಿಗೇ, ಅವಳಿಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬುದಾಗಿ ಪಾರೂಲ್​ ಹೇಳಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ನಟಿಯರ ಬೆಂಬಲಕ್ಕೆ ನಿಂತಿದ್ದ ಪಾರುಲ್, ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಈ ಮೂವರು ಮಹಿಳೆಯರ ಮೇಲೆ ಕೇಂದ್ರೀಕರಿಸುತ್ತಿರುವುದರಲ್ಲಿ ಹೆಚ್ಚು ಅರ್ಥವಿದೆ ಎಂದು‌ ನನಗನಿಸುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.

SCROLL FOR NEXT