ಕೆ.ಆರ್ ಪೇಟೆ: ಕಿರುತೆರೆ ಹಾಸ್ಯ ನಟ ಆರ್ .ಎಸ್.ಪದ್ಮನಾಭ(46) ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಾಲೂಕಿನ ರಾಯಸಮುದ್ರ ಗ್ರಾಮದ ಪಧ್ಮನಾಭ್ ಪಟ್ಟಣದ ತಮ್ಮ ಸ್ವಗೃಹದಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ 1.30ರ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಪಂಚರಂಗಿ ಪಾಂಡು, ಉಘೇ ಉಘೇ ಮಹದೇಶ್ವರ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ಪ್ಯಾಟಿ ಹುಡುಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ ತಮ್ಮ ಹುಟ್ಟೂರು ರಾಯಸಮುದ್ರದಲ್ಲಿ ಚಿತ್ರೀಕರಿಸಲು ಸಹಕಾರ ನೀಡಿದ್ದರು. ರಂಗಭೂಮಿಯಲ್ಲಿ ಇವರು ಪದ್ದು ಎಂದೇ ಪ್ರಸಿದ್ಧಿ ಪಡೆದಿದ್ದರು. ನಾಗಮಂಗಲದ ಕನ್ನಡ ಸಂಘ, ಮೈಸೂರಿನ ನಿರಂತರ,
ಜನಮನ ರಂಗ ತಂಡಗಳಲ್ಲಿ ಸಕ್ರಿಯರಾಗಿದ್ದರು.