ಸಿನಿಮಾ ಸುದ್ದಿ

'ಪೊಗರು' ಸೆಟ್ ನಲ್ಲಿ ಬರ್ತಡೇ ಆಚರಿಸಿಕೊಳ್ಳಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ಧಾರ

ಇಂದು (ಅಕ್ಟೋಬರ್ 6) ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನ್ಮದಿನ. ಈ ಬಾರಿ ನಟ "ಪೊಗರು" ಚಿತ್ರದ ಶೂಟಿಂಗ್ ಸೆಟ್ ನಲ್ಲಿ  ತನ್ನ ವಿಶೇಷ ದಿನವನ್ನು ಕಳೆಯಲಿದ್ದು, ಬಾಕಿ ಇರುವ ಇಂಟ್ರೋ ಸಾಂಗ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.

ಇಂದು (ಅಕ್ಟೋಬರ್ 6) ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನ್ಮದಿನ. ಈ ಬಾರಿ ನಟ "ಪೊಗರು" ಚಿತ್ರದ ಶೂಟಿಂಗ್ ಸೆಟ್ ನಲ್ಲಿ  ತನ್ನ ವಿಶೇಷ ದಿನವನ್ನು ಕಳೆಯಲಿದ್ದು, ಬಾಕಿ ಇರುವ ಇಂಟ್ರೋ ಸಾಂಗ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡ ನಟ "ನಾನು ಈ ವರ್ಷ ತಮ್ಮ ಜನ್ಮದಿನವನ್ನು ಆಚರಿಸಲು ಬಯಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ  ಅಭಿಮಾನಿಗಳು ತಮ್ಮ ಮನೆಯ ಮುಂದೆ ಸೇರದಂತೆಯೂ ಮನವಿ ಮಾಡಿದ್ದಾರೆ. ಬದಲಾಗಿ, ಅವರು ಎಲ್ಲಿದ್ದರೋ ಅಲ್ಲಿಂದಲೇ ಹಾರೈಸಿರೆಂದು ನಟ ಧ್ರುವ ಹೇಳಿದ್ದಾರೆ.

"ಪೊಗರು"ಚಿತ್ರತಂಡ ತಮ್ಮ ಚಿತ್ರದ ನಾಯಕ ನಟನ ಜನ್ಮದಿನದಂದು ಚಿತ್ರದ ಹೊಸ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಧ್ರುವ ಸರ್ಜಾ ತಾವು ಇಂಟ್ರೋ ಸಾಂಗ್ ಗೆ ನರ್ತಿಸುತ್ತಿದ್ದಾರೆ.  ಚಂದನ್ ಶೆಟ್ಟಿ ಸಂಗೀತ,  ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ "ಪೊಗರು ಅಣ್ಣಂಗೆ ಪೊಗರು" ಹಾಡು ಮೂಡಿಬರುತ್ತಿದೆ. ಎಚ್‌ಎಂಟಿಯಲ್ಲಿರಚಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ಈ ಹಾಡಿನ ಶೂಟಿಂಗ್ ನಡೆಯುತ್ತಿದೆ.

ನಂದ ಕಿಶೋರ್ ನಿರ್ದೇಶನದ ಈ ಚಿತ್ರವು ಎರಡು ದಿನಗಳಲ್ಲಿ ಟ್ರ್ಯಾಕ್‌ನ ಶೂಟಿಂಗ್ ಪೂರ್ಣಗೊಳಿಸಲಿದ್ದು, ಕೆಲವು ದಿನಗಳ ಪ್ಯಾಚ್‌ವರ್ಕ್ ಗಾಗಿ ಮುಂದೆ ದಿನಗಳನ್ನು ಮೀಸಲಾಗಿರಿಸಿದೆ.. ಬಿ.ಕೆ.ಗಂಗಾಧರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್‌ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.ಇನ್ನು  ಧನಂಜಯ್  ಸಹ ಚಿತ್ರದಲ್ಲಿಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಮಯೂರಿ, ರವಿಶಂಕರ್, ಚಿಕ್ಕಣ್ಣ, ಮತ್ತು ಕುರಿ ಪ್ರತಾಪ್, ಅಂತರರಾಷ್ಟ್ರೀಯ ಬಾಡಿಬಿಲ್ಡರ್‌ಗಳಾದ ಕೈ ಗ್ರೀನೆ, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್ ಮತ್ತು ಜೋ ಲಿಂಡರ್ ಅವರೂ ಸಹ ಈ ಚಿತ್ರದಲ್ಲಿರುವುದು ಚಿತ್ರದ ಹೈಲೈಟ್ ನಲ್ಲಿ ಒಂದಾಗಿದೆ.

"ಪೊಗರು" ನಂತರ ನಂದ ಕಿಶೋರ್ ಹಾಗೂ ಧ್ರುವ ಸರ್ಜಾ ಇನ್ನೊಂದು ಚಿತ್ರದಲ್ಲೂ ಒಂದಾಗಲಿದ್ದು ಇದನ್ನು ಉದಯ್ ಕೆ ಮೆಹ್ತಾ ನಿರ್ಮಿಸಲಿದ್ದಾರೆ. ಈಗ ಅಂತಿಮ ಹಂತದ ಸ್ಕ್ರಿಪ್ಟ್,  ತಯಾರಿ ನಡೆಯುತ್ತಿದ್ದು ವಿಜಯದಶಮಿಯಂದು ಚಿತ್ರದ ಮಹೂರ್ತ ಕಾರ್ಯಕ್ರಮ ನೆರವೇರಿಸಲು ಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel