ರಾಚೆಲ್ ಡೇವಿಡ್ 
ಸಿನಿಮಾ ಸುದ್ದಿ

ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಕ್ಕೆ ರಾಚೆಲ್ ಡೇವಿಡ್ ಸಜ್ಜು!

"ಈ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಸಮಯದಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ವಿಷಯವೆಂದರೆ ಅದು 'ಲವ್ ಮಾಕ್ಟೇಲ್ 2' ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು" ಎಂದು ಕೃಷ್ಣ ನಿರ್ದೇಶನದ ಚಿತ್ರದ ಬಗ್ಗೆ ನಟಿ ರಾಚೆಲ್ ಡೇವಿಡ್ ಹೇಳಿದರು. 

"ಈ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಸಮಯದಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ವಿಷಯವೆಂದರೆ ಅದು 'ಲವ್ ಮಾಕ್ಟೇಲ್ 2' ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು" ಎಂದು ಕೃಷ್ಣ ನಿರ್ದೇಶನದ ಚಿತ್ರದ ಬಗ್ಗೆ ನಟಿ ರಾಚೆಲ್ ಡೇವಿಡ್ ಹೇಳಿದರು. 

ಮಲಯಾಳಂನ ಇರುಪಾಥಿಯೊನಂ ನೂತಂಡು ಮತ್ತು ಒರೊನ್ನೊನಾರ ಪ್ರಣಯಕಧಾ ಚಿತ್ರಗಳ ಮೂಲಕ ಮಾಲಿವುಡ್ ನಲ್ಲಿ ಹೆಸರಾದ ರಾಚೆಲ್ ಮೈಸೂರು ಮೂಲದವರಾಗಿದ್ದು, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 'ಲವ್ ಮಾಕ್ಟೇಲ್' 2' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುವುದು ನನಗೆ ಹೆಚ್ಚಿನ ಸಂತಸ ನೀಡಿದೆ. ನಾನು ಹೆಚ್ಚು ಉತ್ಸಾಹದಿಂದಿದ್ದು ಶೂಟಿಂಗ್ ಪ್ರಾರಂಭವಾಗುವುದರ ನಿರೀಕ್ಷೆಯಲ್ಲಿದ್ದೇನೆ" ಎಂದು ಅವರು ಹೇಳುತ್ತಾರೆ.

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ "ಲವ್ ಮಾಕ್ಟೇಲ್'" ಚಿತ್ರವನ್ನು ನಾನು ನೋಡಿದ್ದೆ. ಹಾಗೆಯೇ ಚಿತ್ರವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದೆ, ಎನ್ನುವ ನಟಿ  "ಇದು ಪ್ರೀತಿ ಮತ್ತು ಸ್ನೇಹದ ವಿಚಾರದಲ್ಲಿ ಹೊಸತನದಿಂದ ಕೂಡಿದೆ ಎಂದು ನಾನು ಭಾವಿಸಿದ್ದೇನೆ." ಎಂದರು.

ಕೃಷ್ಣ ಮತ್ತು ಮಿಲಾನಾ ನಾಗರಾಜ್ ಅವರು ನಿರ್ಮಿಸಿದ ಈ ಚಿತ್ರವು ಮತ್ತೆ ಶೂಟಿಂಗ್ ಪ್ರಾರಂಭಿಸಿದೆ.  ಮುಂದಿನ ಶೆಡ್ಯೂಲ್ ಅನ್ನು ಪುನರಾರಂಭಿಸಿದಾಗ ರಾಚೆಲ್ ಈ ಸೆಟ್ ಗೆ ಸೇರಿಕೊಳ್ಳುತ್ತಾರೆ. "ಲವ್ ಮಾಕ್‌ಟೇಲ್" ಎಮೋಷನಲ್ ರೋಮ್ಯಾಂಟಿಕ್ ಡ್ರಾಮಾ ಆಗಿದ್ದುಅದರ ಮುಂದುವರಿದ ಭಾಗವು ಬಹಳಷ್ಟು  ಕಾಮಿಡಿಯನ್ನೂ ಒಳಗೊಂಡಿದೆ.

ಅಭಿಲಾಶ್ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸುಷ್ಮಿತಾ ಅವರ ಚೊಚ್ಚಲ ಅಭಿನಯವೂ ಈ ಚಿತ್ರದಲ್ಲಿದ್ದು  ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಈ ಚಿತ್ರದ ಎಡಿಟಿಂಗ್ ಹಾಗೂ ಛಾಯಾಗ್ರಹಣ ಜವಾಬ್ದಾರಿಯನ್ನು ಹೊತ್ತಿದೆ.

ನಾಲ್ಕು ಮಲಯಾಳಂ ಚಿತ್ರಗಳಲ್ಲಿಅಭಿನಯಿಸಿದ ರಾಚೆಲ್, ಭಾಷೆ ವಿಭಿನ್ನವಾಗಿದ್ದರೂ, ಚಿತ್ರೋದ್ಯಮವನ್ನು ಗಣಿಸದೆ ಎಲ್ಲಾ ಕಡೆಯಲ್ಲಿಯೂ ಚಿತ್ರ ನಿರ್ಮಾಣ ಒಂದೇ ಬಗೆಯಲ್ಲಿರುತ್ತದೆ ಎಂದು ಭಾವಿಸಿದ್ದಾರೆ. "ನಾನು ನಿರೀಕ್ಷಿಸುವ ಏಕೈಕ ವ್ಯತ್ಯಾಸವೆಂದರೆ ಹೊಸಬಗೆಯ ಚಿತ್ರೀಕರಣ. ಇದು ಎಲ್ಲಾ ಇಂಡಸ್ಟ್ರಿಗಳಲ್ಲಿ ಸಾಮಾನ್ಯವಾಗಿರುತ್ತದೆ" ಎಂದು ಅವರು ಹೇಳುತ್ತಾರೆ. ಸುರೇಶ್ ಗೋಪಿ ಅಭಿನಯದ ಕವಲ್ ಎಂಬ ಮಲಯಾಳಂ ಚಿತ್ರಕ್ಕೂ ರಾಚೆಲ್ ಸಹಿ ಹಾಕಿದ್ದಾರೆ. "ನಾನು ಕವಲ್ ಮತ್ತು "ಲವ್ ಮಾಕ್ಟೇಲ್" ನಡುವೆ ಒಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳುತ್ತಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT