ಸಿನಿಮಾ ಸುದ್ದಿ

ಕೆಳ ಮಧ್ಯಮ ವರ್ಗದ ಪಾತ್ರ ನಿರ್ವಹಿಸುವುದರಿಂದ ಶ್ರೀಮಂತಿಕೆಯ ಅನುಭವ: ನವಾಜುದ್ದೀನ್ ಸಿದ್ದಿಕಿ

Srinivas Rao BV

ಕೆಳ ಮಧ್ಯಮ ವರ್ಗದ ಪಾತ್ರ ನಿರ್ವಹಿಸುವುದು ಶ್ರೀಮಂತಿಕೆಯ ಅನುಭವ ನೀಡುತ್ತದೆ ಎಂದು ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. 

ಕೆಳ ಮಧ್ಯಮ ವರ್ಗದ ಮನುಷ್ಯನ ಸಾಮಾನ್ಯ ಆದರೂ ಗಾಢವಾದ ಜೀವನದ ಕಥೆಯನ್ನು ತೆರೆ ಮೇಲೆ ತರುವುದು ತಮಗೆ ಮನುಷ್ಯನ ಭಾವನೆಗಳನ್ನು ಅನ್ವೇಷಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಸಿದ್ದಿಕಿ ಅಭಿಪ್ರಾಯಪಟ್ಟಿದ್ದಾರೆ. 

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ ಎಸ್ ಡಿ) ಯಿಂದ ಪದವಿ ಪಡೆದಿರುವ ಸಿದ್ದಿಕಿ ಹಿಂದಿ ಸಿನಿಮಾ ಕ್ಷೇತ್ರದ ಬಹುಬೇಡಿಕೆಯ ನಟನಾಗಿದ್ದು, ಕಹಾನಿ, ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಸರಣಿ, ಲಂಚ್ ಬಾಕ್ಸ್, ಬಜರಂಗಿ ಭಾಯಿಜಾನ್ ಸೇರಿದಂತೆ ಜನಸಾಮಾನ್ಯನ ಪಾತ್ರದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ಓರ್ವ ಕಲಾವಿದನಾಗಿ ಕಾರ್ಮಿಕ ವರ್ಗದ ಪಾತ್ರಗಳನ್ನು ಮಾಡುವುದು ಅತ್ಯಂತ ಶ್ರೀಮಂತಿಕೆಯ ಅನುಭವ ನೀಡಲಿದೆ ಎಂದು ಸಿದ್ಧಿಕಿ ಅಭಿಪ್ರಾಯಪಟ್ಟಿದ್ದಾರೆ.

ಕೆಳ ಮಧ್ಯಮ ವರ್ಗಗಳಲ್ಲಿ, ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿರುತ್ತಾರೆ. ಅವರ ಜೀವನ ಸಂಘರ್ಷ ಪ್ರತಿಯೊಬ್ಬರ ವಿಷಯದಲ್ಲೂ ವಿಭಿನ್ನವಾಗಿರುತ್ತದೆ. ಇಂತಹ ಪಾತ್ರಗಳನ್ನು ಮಾಡುವಾಗ ಸಮೃದ್ಧ ಅನುಭವ ಸಿಗಲಿದೆ ಎಂದು ಸಿದ್ದಿಕಿ ಹೇಳಿದ್ದಾರೆ. 

ಸೀರಿಯಸ್ ಮೆನ್ ಎಂಬ ನೆಟ್ ಫ್ಲಿಕ್ಸ್ ಸಿನಿಮಾದಲ್ಲಿ ಸಿದ್ದಿಕಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆಯನ್ನ್ ಲೇಖಕ ಮನು ಜೋಸೆಫ್ ಅವರ ಸೀರಿಯಸ್ ಮೆನ್ ಯಿಂದ ಅಳವಡಿಸಿಕೊಳ್ಳಲಾಗಿದೆ. ಮಹತ್ವಾಕಾಂಕ್ಷಿಯಾದ, ಆದರೆ ಸಾಧನೆ ಮಾಡಲು ಸಾಧ್ಯವಾಗದ ವ್ಯಕ್ತಿಯೋರ್ವ ತನ್ನ ಮಗನನ್ನು ಕುಟುಂಬದ ಸ್ಥಿತಿಯನ್ನು ಉತ್ತಮಗೊಳಿಸುವಂತೆ ಬೆಳೆಸುವುದು ಸಿನಿಮಾದ ಕಥಾ ಹಂದರವಾಗಿದೆ.
 

SCROLL FOR NEXT