ಶರಣ್ ಆಶಿಕಾ ರಂಗನಾಥ್ 
ಸಿನಿಮಾ ಸುದ್ದಿ

ಸೆಪ್ಟೆಂಬರ್ 14ರಿಂದ ಶರಣ್ ನಟನೆಯ 'ಅವತಾರ ಪುರುಷ' ಶೂಟಿಂಗ್ ಶುರು

ಸ್ಯಾಂಡಲ್‌ವುಡ್‌ನಲ್ಲಿಚಿತ್ರಗಳ ಶೂಟಿಂಗ್ ಮತ್ತೆ ಪ್ರಾರಂಭವಾಗುತ್ತಿದ್ದು ಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳ ಬಾಕಿ ಉಳಿದಿರುವ ಕೆಲಸಗಳನ್ನು  ಪುನರಾರಂಭಿಸಲು ಮುಂದಾಗಿದ್ದಾರೆ. ಫ್ಯಾಂಟಮ್, ಭಜರಂಗಿ 2, ಮತ್ತು ಕೆಜಿಎಫ್ ಚಾಪ್ಟರ್ 2 ರಂತಹ ಚಿತ್ರಗಳ ನಂತರ ಇದೀಗ ಸುನಿ ನಿರ್ದೇಶನದ "ಅವತಾರ ಪುರುಷ "ಚಿತ್ರೀಕರಣ ಪುನಾರಂಭವಾಗುತ್ತಿದೆ.  ಪುಷ್ಕರ್ ಮಲ್ಲಿಕರ್ಜುನಯ್ಯ ನಿರ್ಮಿ

ಸ್ಯಾಂಡಲ್‌ವುಡ್‌ನಲ್ಲಿಚಿತ್ರಗಳ ಶೂಟಿಂಗ್ ಮತ್ತೆ ಪ್ರಾರಂಭವಾಗುತ್ತಿದ್ದು ಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳ ಬಾಕಿ ಉಳಿದಿರುವ ಕೆಲಸಗಳನ್ನು  ಪುನರಾರಂಭಿಸಲು ಮುಂದಾಗಿದ್ದಾರೆ. ಫ್ಯಾಂಟಮ್, ಭಜರಂಗಿ 2, ಮತ್ತು ಕೆಜಿಎಫ್ ಚಾಪ್ಟರ್ 2 ರಂತಹ ಚಿತ್ರಗಳ ನಂತರ ಇದೀಗ ಸುನಿ ನಿರ್ದೇಶನದ "ಅವತಾರ ಪುರುಷ "ಚಿತ್ರೀಕರಣ ಪುನಾರಂಭವಾಗುತ್ತಿದೆ.  ಪುಷ್ಕರ್ ಮಲ್ಲಿಕರ್ಜುನಯ್ಯ ನಿರ್ಮಿಸಿರುವ ಈ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಇದೇ ತಿಂಗಳ 14 ರಿಂದ ಪುನಾರಂಭ ಕಾಣಲಿದೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸುನಿ ಒಂದು ಫೈಟಿಂಗ್ ದೃಶ್ಯದ ಶೂಟಿಂಗ್ ನಡೆಸಬೇಕಿದೆ, ಇದನ್ನು ವಿಕ್ರಮ್ ಸಂಯೋಜಿಸಲಿದ್ದಾರೆ. ಮೂರು ಹಾಡುಗಳಿಗೆ ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿನೆ ಮಾಡುತ್ತಾರೆ. ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಾಗುತ್ತದೆ. ನಟರಾದ  ಸಾಯಿ ಕುಮಾರ್, ಸುಧಾರಾಣಿ ಮತ್ತು ಭವ್ಯಾ ಸಹ ಸೆಟ್ಟಿಗೆ ಆಗಮಿಸಲಿದ್ದಾರೆ ಎಂದರು.

ರ್ಯಾಂಬೋ  2 ನ ಚುಟು ಚುಟು ಜೋಡಿ ಇದೀಗ ಮತ್ತೊಮ್ಮೆ ಒಂದಾಗಿದೆ "ಅವತಾರ ಪುರುಷ" ಒಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದ್ದು ಫೆಬ್ರವರಿಯಲ್ಲಿ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಪ್ರಾರಂಭವಾಗಿತ್ತು. ತ್ರಿಶಂಕು  ಹಾಗೂ ಮಹಾಭಾರತದ ಜನಪ್ರಿಯ ವಾಕ್ಯ ಅಶ್ವಥ್ಥಾಮ ಹತಃ ಕುಂಜರಃ ಎಂಬ ವಾಕ್ಯವನ್ನೂ ಸುನಿ ಕಥೆಯಲ್ಲಿ ಸೇರಿಸಿದ್ದಾರೆ, ಇದರಲ್ಲಿ ಶರಣ್ ಕಿರಿಯ ಕಲಾವಿದನ ಪಾತ್ರ ವಹಿಸುತ್ತಿದ್ದು ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್ ಗಳಿದೆ. 

ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅವತಾರ ಪುರುಷ ದಲ್ಲಿ ಒಡಿಶಾ ಮೂಲದ ಕುಮಾರ ಎಂಬ ಬ್ಲಾಕ್ ಮಾಜಿಷಿಯನ್ ಆಗಿ  ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಡಿಒಪಿ ವಿಲಿಯಂ ಡೇವಿಡ್ ಕ್ಯಾಮೆರಾ ಕೆಲಸವನ್ನು ನಿರ್ವಹಿಸಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT