ಕಿಚ್ಚ ಸುದೀಪ್! 
ಸಿನಿಮಾ ಸುದ್ದಿ

ಅತಿ ಹೆಚ್ಚು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಕಾಣಿಸಿದ ಕನ್ನಡ ನಟ ಕಿಚ್ಚ ಸುದೀಪ್!

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರ ಜನ್ಮದಿನ ಇಂದು.  ಅವರುಬಹುಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಪ್ಯಾನ್-ಇಂಡಿಯಾ  ಚಿತ್ರಗಳಿಂದ ಹೆಚ್ಚು ಆಫರ್ ಗಳನ್ನು ಪಡೆಯುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್‌ನಾದ್ಯಂತ ತನ್ನ ಛಪು ಮೂಡಿಸಿರುವ ಸ್ಟಾರ್ ನಟ ಈಗ ಬೆರಳೆಣಿಕೆಯ ಯೋಜನೆಗಳಿಗಷ್ಟೇ ಸಹಿ ಹಾಕುತ್ತಿದ್ದಾರೆ. 

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರ ಜನ್ಮದಿನ ಇಂದು.  ಅವರುಬಹುಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಪ್ಯಾನ್-ಇಂಡಿಯಾ  ಚಿತ್ರಗಳಿಂದ ಹೆಚ್ಚು ಆಫರ್ ಗಳನ್ನು ಪಡೆಯುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್‌ನಾದ್ಯಂತ ತನ್ನ ಛಪು ಮೂಡಿಸಿರುವ ಸ್ಟಾರ್ ನಟ ಈಗ ಬೆರಳೆಣಿಕೆಯ ಯೋಜನೆಗಳಿಗಷ್ಟೇ ಸಹಿ ಹಾಕುತ್ತಿದ್ದಾರೆ. 

ಹಿಂದಿ ಭಾಷೆಗಳಲ್ಲಿ ಮಾಡಿದ ಫೂಂಕ್, ರಣ್ ಮತ್ತು ರಕ್ತ ಚರಿತ್ರಾ ಮತ್ತು ವಿಜಯ್ ಅವರ ತಮಿಳು ಚಿತ್ರ ಪುಲ್ಲಿ, ಬಾಹುಬಲಿ - ದಿ ಬಿಗಿನಿಂಗ್, ಚಿರಂಜೀವಿ ಅವರ 151 ನೇ ಚಿತ್ರ, ಸೈರಾ ನರಸಿಂಹ ರೆಡ್ಡಿ, ಸೇರಿ ಇತ್ತೀಚಿನ ದಬಂಗ್ 3,  ಪೃಥ್ವಿರಾಜ್ ಗಳಲ್ಲಿ ಸಹ ಅಭಿನಯಿಸಿದ್ದಾರೆ.  ಪ್ರಥ್ವಿರಾಜ್ ಸುದೀ ಪ್ ಸಧ್ಯ ಕೆಲಸ ಮಾಡುತ್ತಿರುವ ಚಿತ್ರವಾಗಿದ್ದು ಇದರಲ್ಲಿ ಅವರು ಸುಕುಮಾರನ್ ಎಂಬ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ವರ್ಚುವಲ್ ಪ್ರೊಡಕ್ಷನ್ ಆಗಿ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಭಾರತದ ಮೊದಲ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತದೆ.

ಈ ನಡುವೆ ಇನ್ನೂ ಹೆಸರಿಸಬೇಕಾದ ಯೋಜನೆಯೊಂದಕ್ಕೆ ಕಿಚ್ಚ ಗೋಕುಲ್ ರಾಜ್ ಬಾಸ್ಕರ್ ಅವರೊಂದಿಗೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.. ಈ ಚಿತ್ರ ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿಏಕಕಾಲಕ್ಕೆ ತೆರೆಗೆ ಬರಲಿದೆ. ಆದರೆ, ಸುದೀಪ್ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೂಲವೊಂದರ ಪ್ರಕಾರ, ಪ್ರಸ್ತುತ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿರುವ ನಟ ಇನ್ನೂ ಅದಕ್ಕೆ ಗ್ರೀನ್ ಸಿಗ್ನಲ್ ನೀಡಬೇಕಾಗಿದೆ.

ವೈಕಾನ್ 18 ಪ್ರಸ್ತುತಪಡಿಸುವ ಮತ್ತೊಂದು ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎನ್ನಲಾಗಿದ್ದು  ಇದನ್ನು ಹಿಂದಿ ಮತ್ತು ಬೇರೆ ಭಷೆಯಲ್ಲಿ ತಯಾರಿಸಲಾಗುತ್ತದೆ. . "ಇದು ಚರ್ಚೆಯ ಪ್ರಾಥಮಿಕ ಹಂತದಲ್ಲಿದೆ, ಮತ್ತು ನಾವು ಒಪ್ಪಂದವನ್ನು ಖಾತ್ರಿಪಡಿಸಿದ ನಂತರ ಅಧಿಕೃತ ಮಾಹಿತಿ ನೀಡಬಹುದು. " ಮೂಲಗಳು ಹೇಳಿದೆ. 

ಸುದೀಪ್ ಅವರ ಜನ್ಮದಿನದಂದು ಕೋಟಿಗೊಬ್ಬ  3 ತಂಡ ಟೀಸರ್ ಗಿಫ್ಟ್ ನೀಡಲು ತಯಾರಾಗಿದೆ. ಕೊರೋನಾ ಕಾರಣದಿಂದ ಈ ಬಾರಿ ಅವರ ಜನ್ಮದಿನಾಚರಣೆಯು ಹೆಚ್ಚು ಸಂಭ್ರಮವಿಲ್ಲದೆ ಸರಳವಾಗಿ ನಡೆಯಲಿದೆ. ಈ ನಡುವೆ ನಟ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿ ಗದ್ದುಗೆಯ ದರ್ಶನ ಪಡೆದಿದ್ದಾರೆ. 

ಕಿಚ್ಚ ಸುದೀಪ್ ಪ್ರಸ್ತುತ ತ ಫ್ಯಾಂಟಮ್ ಚಿತ್ರೀಕರಣದಲ್ಲಿ ತೊಡಗಿದ್ದು  ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅನೂಪ್  ಭಂಡಾರಿ ನಿರ್ದೇಶಿಸಿದ ಈ ಚಿತ್ರವು ಲಾಕ್ ಡೌನ್ ನಂತರ ಶೂಟಿಂಗ್ ಪುನರಾರಂಭಿಸಿದ ಭಾರತದ ಮೊದಲ ಚಿತ್ರಗಳಲ್ಲಿ ಒಂದಾಗಿದೆ. ಏತನ್ಮಧ್ಯೆ, ನಟನ ಅಭಿಮಾನಿಗಳಿಗೆ ಬುಧವಾರ ಕೋಟಿಗೊಬ್ಬ  3ವಿಶೇಷ ಟೀಸರ್ ಮೂಲಕ ಗಿಫ್ಟ್ ನೀಡಲು ಆ ಚಿತ್ರತಂಡ ತಯಾರಾಗಿದೆ. ಶಿವ ಕಾರ್ತಿಕ್ ನಿರ್ದೇಶನದ ಮತ್ತು ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!