ಸಿನಿಮಾ ಸುದ್ದಿ

ಒಂದಿಬ್ಬರ ತಪ್ಪಿಗೆ ಇಡೀ ಚಿತ್ರರಂಗದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಕೆಎಫ್'ಸಿಸಿ

Manjula VN

ಬೆಂಗಳೂರು: ಒಂದಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ನಟ-ನಟಿಯರು ಹಾಗೂ ತಾಂತ್ರಿಕ ತಜ್ಞರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್'ಸಿಸಿ) ಬುಧವಾರ ಹೇಳಿದೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ಕೆಲವರ ಕಾರಣಕ್ಕೆ ಇಡೀ ಚಿತ್ರರಂಗದ ಕಡೆ ಬೆರಳ ಮಾಡಬೇಡಿ. ಚಿತ್ರರಂಗದ ಯಾರಾದರೂ ತಪ್ಪಿತಸ್ಥರು ಎಂದು ಸಾಬೀತಾದರೆ ಅವರ ಮೇಲೆ ವಾಣಿಜ್ಯ ಮಂಡಳಿ ಕೂಡ ತೀವ್ರವಾದ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ಇಲ್ಲ ಎಂದು ಹೇಳುತ್ತಿಲ್ಲ. ತೆವಲಿಗಾಗಿ 1-2 ಸಿನಿಮಾ ಮಾಡಿದವರು ಇಂತಹ ಜಾಲದಲ್ಲಿ ಇರಬಹುದು. ಆದರೆ, ಆ ಒಂದಿಬ್ಬರೇ ಇಡೀ ಚಿತ್ರರಂಗವಲ್ಲ ಎಂದು ಕಿಡಿಕಾರಿದ್ದಾರೆ. 

ಇದೇ ವೇಳೆ ಡ್ರಗ್ ಜಾಲದ ಪ್ರಕರಣದಲ್ಲಿ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿರುವ ಪ್ರಶಾಂತ್ ಸಂಬರಗಿ ಯಾರೆಂದು ಕಾರವಾಗಿ ಪ್ರಶ್ನಿಸಿದ ಗೋವಿಂದು ಅವರು, ಸಂಬರಗಿ ಸಿನಿಮಾ ನಿರ್ದೇಶನ ಮಾಡಿಲ್ಲ. ನಿರ್ಮಾಣ ಮಾಡಿಲ್ಲ, ವಿತರಣೆ ಮಾಡಿಲ್ಲ. ಅವರು ಸಾಮಾಜಿಕ ಕಾರ್ಯಕರ್ತರಷ್ಟೇ. ಅವರನ್ನು ಚಿತ್ರೋದ್ಯಮಿ ಎಂದು ಕರೆಯಬೇಡಿ ಎಂದಿದ್ದಾರೆ. 

SCROLL FOR NEXT