ರೆಸ್ಲರ್ ದಿ ರಾಕ್ 
ಸಿನಿಮಾ ಸುದ್ದಿ

ಹಾಲಿವುಡ್ ಸೂಪರ್ ಸ್ಚಾರ್, ಖ್ಯಾತ ರೆಸ್ಲರ್ 'ದಿ ರಾಕ್'' ಡ್ವೇನ್ ಜಾನ್ಸನ್ ಗೂ ಒಕ್ಕರಿಸಿದ ಕೊರೋನಾ ಸೋಂಕು

ಹಾಲಿವುಡ್ ಸೂಪರ್ ಸ್ಟಾರ್ ಹಾಗೂ ಖ್ಯಾತ WWE ರೆಸ್ಲರ್ ಡ್ವೇನ್ ಜಾನ್ಸನ್ (ದಿ ರಾಕ್)ಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಷಿಂಗ್ಟನ್: ಹಾಲಿವುಡ್ ಸೂಪರ್ ಸ್ಟಾರ್ ಹಾಗೂ ಖ್ಯಾತ WWE ರೆಸ್ಲರ್ ಡ್ವೇನ್ ಜಾನ್ಸನ್ (ದಿ ರಾಕ್)ಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸ್ವತಃ ಡ್ವೇನ್ ಜಾನ್ಸನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ನಾನು ಮತ್ತು ನನ್ನ ಕುಟುಂಬಸ್ಥರು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಕಳೆದ ಮೂರುವರೆ ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ. ಆದರೆ ಅಭಿಮಾನಿಗಳು ಭಯಪಡುವ ಅವಶ್ಯಕತೆ ಇಲ್ಲ. ನಮ್ಮ ಆರೋಗ್ಯ  ಸ್ಥಿರವಾಗಿದ್ದು, ನಾವು ಚಟುವಟಿಕೆಯಿಂದ ಇದ್ದೇವೆ. ನನ್ನ ಪತ್ನಿ ಹಾಗೂ ನನ್ನ ಇಬ್ಬರು ಪುತ್ರಿಯರಿಗೂ ಸೋಂಕು ತಗುಲಿದೆ. ಸೋಂಕು ತಗುಲಿದ ಬಳಿಕ ನಾವು ಎಲ್ಲರೂ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದೇವೆ. ನಿಜಕ್ಕೂ ಈ ಸಮಯ ನಮಗೆ ಕಠಿಣವಾಗಿತ್ತು. ನನ್ನ ಕುಟುಂಬಸ್ಥರ ಕುರಿತು ನಾನು ಆತಂಕಗೊಂಡಿದ್ದೆ.  ಆದರೆ ವೈದ್ಯರೊಂದಿಗಿನ ಚರ್ಚೆ ಬಳಿಕ ನಾನು ಕೊಂಚ ನಿರಾಳನಾಗಿದ್ದೇನೆ ಎಂದು ರಾಕ್ ಹೇಳಿದ್ದಾರೆ.

ಇದೇ ವೇಳೆ ತಮ್ಮ ಅಭಿಮಾನಿಗಳಿಗೆ ವೈರಸ್ ಸೋಂಕು ಕುರಿತು ಸಲಹೆ ನೀಡಿರುವ ರಾಕ್, ದಯಮಾಡಿ ಶಿಸ್ತು ಪಾಲಿಸಿ, ಕೊರೋನಾ ಸೋಂಕು ಸಂಬಂಧಿಸಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಮಾಸ್ಕ್ ಅನ್ನು ಕಡ್ಟಾಯವಾಗಿ ಧರಿಸಿ. ನೀವೂ ಸುರಕ್ಷಿತವಾಗಿರಿ  ಮತ್ತು ಇತರರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಜನ ಸೇರುವ ಕಡೆ ಹೆಚ್ಚಾಗಿ ಇರಬೇಡಿ ಮತ್ತು ಜನ ಸೇರದಂತೆ ಎಚ್ಚರ ವಹಿಸಿ ಎಂದು ರಾಕ್ ಕಿವಿ ಮಾತು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್, ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! video

ಮಂಡ್ಯದಲ್ಲಿ ARAI ಕೇಂದ್ರಕ್ಕೆ ಜಾಗ: ರಾಜ್ಯ ಕೈಗಾರಿಕೆ ಸಚಿವರ ಜೊತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಮಾಲೋಚನೆ!

SCROLL FOR NEXT