ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಪಾರ್ಟಿಗೆ ಹೋಗೋದು ನಿಜ, ಡ್ರಗ್ಸ್ ವಿಚಾರದ ಬಗ್ಗೆ ಗೊತ್ತಿಲ್ಲ: ತುಪ್ಪದ ಹುಡುಗಿ 'ರಾಗಿಣಿ'

ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿಸಿಬಿ ವಶದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿಸಿಬಿ ವಶದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಗೊಳಗಾಗಿರುವ ರಾಗಿಣಿ, ಪೊಲೀಸ್ ವಿಚಾರಣೆ ವೇಳೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ತಾನೊಬ್ಬಳು ಸ್ಯಾಂಡಲ್ ವುಡ್ ನ ಸ್ಟಾರ್ ನಟಿ. ತಾವು ಬೆಳೆಯುತ್ತಿರುವುದನ್ನು ಸಹಿಸದವರು ಬಹಳ ಜನರಿದ್ದಾರೆ. ಆದ್ದರಿಂದ ಈ ಆರೋಪಗಳು ಕೇಳಿ ಬಂದಿದೆ ಎಂದಿದ್ದಾರಂತೆ. ಇನ್ನು ಸ್ಟಾರ್ ನಟಿಯಾಗಿರುವುದರಿಂದ ಪಾರ್ಟಿಗಳಿಗೆ ಹೋಗುತ್ತಿದೆ. ಆದರೆ ಡ್ರಗ್ಸ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರ ಮೂರು ದಿನದ ಕಸ್ಟಡಿ ಅವದಿ ಮುಗಿದ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಅಧಿಕಾರಿಗಳು 1ನೇ ಎಸಿಎಂಎಂ ಕೋರ್ಟ್ ನ್ಯಾಯಧೀಶರಾದ ಜಗದೀಶ್ ಅವರು ಹಾಜರುಪಡಿಸಿದರು. ಈ ವೇಳೆ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರಿಗೆ 10 ಕಾಲ ಸಿಸಿಬಿ ಕಸ್ಟಡಿ ವಿಸ್ತರಿಸುವಂತೆ ಕೋರ್ಟ್ ಗೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು 5 ದಿನಕ್ಕೆ ಮಾತ್ರ ಕಸ್ಟಡಿಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಭಾರೀ ದುರಂತ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸಾವು

Kohli ದಾಖಲೆ ಧೂಳಿಪಟ: T20ಯಲ್ಲಿ ಹಲವು ದಾಖಲೆ ಬರೆದ ಶ್ರೇಯಸ್ ಅಯ್ಯರ್

ಚಿಕ್ಕಬಳ್ಳಾಪುರ: ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ಮನೆಗೆ ನುಗ್ಗಿ ಕತ್ತು ಕೊಯ್ಯಲು ಯತ್ನ, ಪುಂಡರಿಂದ ಕಲ್ಲು ತೂರಾಟ!

ಜೈಲು ಪಾಲಾದ್ರೆ CM, PM ಕುರ್ಚಿ ಖಾಲಿ: ಕೇಂದ್ರದ 130ನೇ ಸಂವಿಧಾನ ತಿದ್ದುಪಡಿ ಬಿಲ್'ಗೆ ವಿಪಕ್ಷಗಳ ವಿರೋಧ; ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಹೈಡ್ರಾಮಾ ಫಿಕ್ಸ್..!

ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಐತಿಹಾಸಿಕ ಗುರುದ್ವಾರ ಧ್ವಂಸ; ಭಾರತ ಖಂಡನೆ, ತೀವ್ರ ಪ್ರತಿಭಟನೆ