ರಚಿತಾ ರಾಮ್ 
ಸಿನಿಮಾ ಸುದ್ದಿ

‘ಕಸ್ತೂರಿ ನಿವಾಸ’ ಅಲ್ಲ ‘ಕಸ್ತೂರಿ ಮಹಲ್’: ಒತ್ತಡಕ್ಕೆ ಮಣಿದು ಕೊನೆಗೂ ಶೀರ್ಷಿಕೆ ಬದಲಿಸಿದ ನಿರ್ಮಾಪಕರು

ಇತ್ತೀಚೆಗೆ ಮುಹೂರ್ತ ನೆರವೇರಿಸಿಕೊಂಡಿದ್ದ, ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿರುವ ‘ಕಸ್ತೂರಿ ನಿವಾಸ’ದ ಟೈಟಲ್ ಕೊನೆಗೂ ಬದಲಾಗಿ ‘ಕಸ್ತೂರಿ ಮಹಲ್’ ಆಗಿದೆ.

ಇತ್ತೀಚೆಗೆ ಮುಹೂರ್ತ ನೆರವೇರಿಸಿಕೊಂಡಿದ್ದ, ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿರುವ ‘ಕಸ್ತೂರಿ ನಿವಾಸ’ದ ಟೈಟಲ್ ಕೊನೆಗೂ ಬದಲಾಗಿ ‘ಕಸ್ತೂರಿ ಮಹಲ್’ ಆಗಿದೆ.

ಟೈಟಲ್ ನಿಂದಾಗಿ ಡಾ ರಾಜ್ ಅಭಿಮಾನಿಗಳ ಕೆಂಗಣ್ಣಿಗೆ ನಿರ್ಮಾಪಕರು ಗುರಿಯಾಗಿದ್ದರು. 

ಹಿರಿಯ ನಿರ್ದೇಶಕ ಭಗವಾನ್ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಸ್ವತಃ ದಿನೇಶ್ ಬಾಬು, ಶೀರ್ಷಿಕೆ ಬದಲಿಸದಿದ್ದರೆ ನಿರ್ದೇಶನ ಮಾಡುವುದಿಲ್ಲ ಎಂದಿದ್ದರು.

ಶೀರ್ಷಿಕೆ ರಿವೀಲ್ ಆದ ದಿನದಿಂದ ಸಾಕಷ್ಟು ಅಭಿಮಾನಿಗಳು ಶೀರ್ಷಿಕೆ ಬದಲಿಸುವಂತೆ ಸಲಹೆ ಕೊಟ್ಟಿದ್ದರು. ಅದಕ್ಕಾಗಿ ಈಗ ಶೀರ್ಷಿಕೆಯನ್ನು ಬದಲಿಸಲಾಗಿದೆ ಎಂದು ಹೇಳಿದ್ದಾರೆ. 

ಇನ್ನು  ‘ಕಸ್ತೂರಿ ಮಹಲ್’ ಚಿತ್ರದ ಚಿತ್ರೀಕರಣ ಅಕ್ಟೋಬರ್ 5ರಿಂದ ಮೂಡಿಗೆರೆ ಸಮೀಪದ ಕೊಟ್ಟಿಗೆಹಾರದಲ್ಲಿ ಪ್ರಾರಂಬವಾಗಲಿದೆ. ಹಾರರ್-ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರವು ನಿರ್ದೇಶಕ ದಿನೇಶ್ ಬಾಬು ಅವರ ಐವತ್ತನೇ ಚಿತ್ರವಾಗಿದೆ. ಶ್ರೀಭವಾನಿ‌ ಆರ್ಟ್ಸ್ ಹಾಗೂ
ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ಹಾಗೂ ರುಬಿನ್ ರಾಜ್ ಈ ಚಿತ್ರದ ನಿರ್ಮಾಪಕರಾಗಿದ್ದು ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಸಂಕಲನ ಚಿತ್ರಕ್ಕಿದೆ.  ರಚಿತಾರಾಂ, ಸ್ಕಂಧ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ಪ್ರಮುಖ ತಾರಾಂಗಣದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT