ಪುನೀತ್ ರಾಜ್‌ಕುಮಾರ್ 
ಸಿನಿಮಾ ಸುದ್ದಿ

'ಜೇಮ್ಸ್' ಶೂಟಿಂಗ್ ಗೆ ಸಜ್ಜಾದ ಪವರ್ ಸ್ಟಾರ್ ಪುನೀತ್ 

ಸೆಪ್ಟೆಂಬರ್ 20 ರಿಂದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಶೂಟಿಂಗ್ ಪುನರಾರಂಭಿಸಲು ಪುನೀತ್ ರಾಜ್‌ಕುಮಾರ್ ತಯಾರಾಗುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈ ಚಿತ್ರದ ಶೂಟಿಂಗ್ ಮುಗಿಯುವ ನಿರೀಕ್ಷೆ ಇದ್ದು ಏತನ್ಮಧ್ಯೆ, "ಜೇಮ್ಸ್" ಚಿತ್ರತಂಡ  ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಿಶೋರ್ ಪಾತಿಕೊಂಡ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎ

ಸೆಪ್ಟೆಂಬರ್ 20 ರಿಂದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಶೂಟಿಂಗ್ ಪುನರಾರಂಭಿಸಲು ಪುನೀತ್ ರಾಜ್‌ಕುಮಾರ್ ತಯಾರಾಗುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈ ಚಿತ್ರದ ಶೂಟಿಂಗ್ ಮುಗಿಯುವ ನಿರೀಕ್ಷೆ ಇದ್ದು ಏತನ್ಮಧ್ಯೆ, "ಜೇಮ್ಸ್" ಚಿತ್ರತಂಡ  ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಿಶೋರ್ ಪಾತಿಕೊಂಡ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್, ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲ ಬಾರಿಗೆ ಒಂದಾಗಿಸಿದೆ. 

ಅವರು ಮಾರ್ಚ್ ನಲ್ಲಿ  ರವಿವರ್ಮ ಅವರ ನೃತ್ಯ ಸಂಯೋಜನೆಯ ನೈಟ್ ಸೀಕ್ವೆಲ್ ನೊಂದಿಗೆ ಶೂಟಿಂಗ್ ಪ್ರಾರಂಭಿಸಿದರು ಮತ್ತು ಲಾಕ್ ಡೌನ್ ಮುನ್ನ ಶೆಡ್ಯೂಕ್ ಸಹ  ಪೂರ್ಣಗೊಳಿಸಿದ್ದರು. ಕಲಾ ನಿರ್ದೇಶಕ ಮತ್ತು ಕ್ಯಾಮರಾಮನ್ ಸೇರಿದಂತೆ ತಂಡವು ಇತ್ತೀಚೆಗೆ ಐದು ದಿನಗಳ ಕಾಲ ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಶೂಟಿಂಗ್ ನಡೆಯಲಿರುವ ಸ್ಥಳವನ್ನು ಅಂತಿಮ ಮಾಡಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮಧ್ಯಭಾಗದಲ್ಲಿ"ಜೇಮ್ಸ್ " ಚಿತ್ರೀಕರಣ ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ. 

ಏತನ್ಮಧ್ಯೆ, ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವ ಸಂಗೀತ ನಿರ್ದೇಶಕ ಚರಣ್ ರಾಜ್ ಪ್ರಸ್ತುತ ಅದಕ್ಕಾಗಿ ತಯಾರಿಯಲ್ಲಿದ್ದಾರೆ. ಚಿತ್ರಕ್ಕೆ ನಾಯಕಿ, ವಿಲನ್ (ಖಳನಾಯಕ)ಮತ್ತು ಪೋಷಕ ಪಾತ್ರಗಳು ಸೇರಿದಂತೆ ಸ್ಟಾರ್ ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.

 ಮೂಲಗಳ ಪ್ರಕಾರ, ಅವರು ಸ್ಯಾಂಡಲ್ ವುಡ್ ಮತ್ತು ಇತರ ಭಾಷೆಗಳ ಕೆಲವು ಪ್ರಸಿದ್ಧ ಕಲಾವಿದರನ್ನು ಕರೆತರಲು ಯೋಜಿಸುತ್ತಿದ್ದಾರೆ. "ಜೇಮ್ಸ್"  ಶೀರ್ಷಿಕೆ ಮತ್ತು ಪೋಸ್ಟರ್‌ಗಳೊಂದಿಗೆ ಇದಾಗಲೇ ಸಂಚಲನ ಸೃಷ್ಟಿಯಾಗಿದ್ದು  ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT