ಸಿನಿಮಾ ಸುದ್ದಿ

ಶೂಟಿಂಗ್ ವೇಳೆ ಕುಸಿದು ಬಿದ್ದು ಪ್ರಸಿದ್ದ ಮಲಯಾಳಂ ನಟ ಸಾವು

Raghavendra Adiga

ಪ್ರಸಿದ್ದ ಮಲಯಾಳಂ ನಟ  ಪ್ರಬೀಶ್ ಚಕ್ಕಲಕ್ಕಲ್(44) ಶೂಟಿಂಗ್ ವೇಳೆಯಲ್ಲೇ ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದ್ದಾರೆ. 

ನಟ ಪ್ರಬೀಶ್ ಚಕ್ಕಲಕ್ಕಲ್ ಅವರು ಮಲಯಾಳಂ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಅವರು ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಸಮಯದಲ್ಲಿ ನಟ ಕುಸಿದು ಬಿದ್ದು ಪ್ರಜ್ಞೆ ತಪ್ಪಿ ಸಾವಿಗೀಡಾಗಿದ್ದಾರೆ. 

ಕೇರಳದ ಕೊಚ್ಚಿಯಲ್ಲಿ ಪ್ರಬೀಶ್ ಯೂಟ್ಯೂಬ್ ಚಾನೆಲ್ ಚಿತ್ರೀಕರಣದಲ್ಲಿದ್ದಾಗ ಈ ಘಟನೆ ನಡೆದಿದೆ.

ಇವರೊಡನೆ ಸೆಟ್ ನಲ್ಲಿದ್ದ ರ ಸಹೋದ್ಯೋಗಿಗಳು ಕೆಲಸ ಪೂರ್ಣವಾದ ನಂತರ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದ್ದರು.  ಆ ವೇಳೆ ಪ್ರಬೀಶ್ ಕುಸಿದು ಬಿದ್ದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನಟ ಕುಸಿದು ಬಿದ್ದಾಗ ವಿಡಿಯೋಗ್ರಾಫರ್‌ನಿಂದ ನೀರು ಕೋರಿದರು. ತಕ್ಷಣ ನೀರು ಕೊಡಲಾಗಿತ್ತು. ಏತನ್ಮಧ್ಯೆ, ಅವರ ಜೇಬಿನಲ್ಲಿ ಕಾರಿನ ಕೀಲಿಕೈ ಕಂಡುಬಂದಿದ್ದು ತಕ್ಷಣ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ನಟ ಸಾವನ್ನಪ್ಪಿದ್ದಾರೆಂದು ಘೋಷಿಸಿದರು.

ಪ್ರಬೀಶ್ ಹಲವು ಟೆಲಿಫಿಲಮ್ ಗಳಲ್ಲಿ ಅಭಿನಯಿಸಿದ್ದರು, ಡಬ್ಬಿಂಗ್ ಕಲಾವಿದನಾಗಿ, ಅವರು ಅನೇಕ ಪ್ರಸಿದ್ಧ ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಬೀಶ್ ತಂದೆ, ಪತ್ನಿ ಹಾಗೂ ಮಗಳನ್ನು ಬಿಟ್ಟು ಅಗಲಿದ್ದಾರೆ.

SCROLL FOR NEXT