ಸಿನಿಮಾ ಸುದ್ದಿ

'ಮೌನ ಮಾತಾದಾಗ' ಕನ್ನಡ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

Raghavendra Adiga

ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ  ‘ಮೌನ ಮಾತಾದಾಗ ’ ಮೂಕಿ ಕನ್ನಡ ಕಿರುಚಿತ್ರಕ್ಕೆ ಏಷ್ಯನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ -2020 ರಲ್ಲಿ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಲಭಿಸಿದೆ.

ದಕ್ಷಿಣ ಕನ್ನಡದ ಪುತ್ತೂರಿನ ಮೂಲದ ಪ್ರಜ್ವಲ್ ಕರ್ಪೆ ಬರೆದು ನಿರ್ದೇಶಿಸಿದ ಈ ಕಿರುಚಿತ್ರವನ್ನು ಜರ್ಮನಿಯ ಮ್ಯಾಕ್ಸಿಮ್ ಗೋರ್ಕಿ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಯಿತು.

ಹಿರಿಯ ನಟ ಮತ್ತು ಗೀತರಚನೆಕಾರ ಡಾ. ಕಾಸರಗೋಡು ಅಶೋಕ್ ಕುಮಾರ್ ಮತ್ತು ರಂಗಭೂಮಿ ಹಿನ್ನೆಲೆಯ ಸುಬ್ರಮಣ್ಯ ಪೈ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಿರ್ದೇಶಕ ಪ್ರಜ್ವಲ್ ಸಹ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಪ್ರಜ್ವಲ್ ಕಾರ್ಪೆ ತುಳು ಚಲನಚಿತ್ರ ಭೋಜರಾಜ್ ಎಂಬಿಬಿಎಸ್ ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು ಕೆಲ ರುಚಿತ್ರಗಳು ಮತ್ತು ಆಲ್ಬಮ್ ಸಾಂಗ್ ಅನ್ನು ನಿರ್ದೇಶಿಸಿದ್ದಾರೆ.  ಜೊತೆಗೆ ಜಾಹೀರಾತುಗಳು, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳಲ್ಲಿ ಸಹ ಕೆಲಸ ಮಾಡಿದ್ದಾರೆ. 

SCROLL FOR NEXT