ತಪಶ್ವಿನಿ, ರಿಶಬ್ ಶೆಟ್ಟಿ, ರಚನಾ ಇಂದರ್ 
ಸಿನಿಮಾ ಸುದ್ದಿ

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬಂದ ತಪಶ್ವಿನಿ, ರಚನಾ ಇಂದರ್!

ರಿಶಬ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ತಪಶ್ವಿನಿ ಮತ್ತು ರಚನಾ ಇಂದರ್ ಎಂಬ ನಾಯಕಿಯರ ಆಗಮನವಾಗಿದೆ.

ರಿಶಬ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ತಪಶ್ವಿನಿ ಮತ್ತು ರಚನಾ ಇಂದರ್ ಎಂಬ ನಾಯಕಿಯರ ಆಗಮನವಾಗಿದೆ.

ಗಿರಿ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಇಬ್ಬರು ನಾಯಕಿಯರಿರಲಿದ್ದು, ರಚನಾ ಇಂದರ್ ಈಗಾಗಲೇ ಲವ್ ಮಾಕ್ಟೇಲ್ ಚಿತ್ರದಲ್ಲಿ ಅದಿತಿ ಪಾತ್ರದ ಮೂಲಕ ಪರಿಚಿತರಾಗಿದ್ದಾರೆ. ಇದು ಅವರ ಎರಡನೇ ಚಿತ್ರ. ಇನ್ನು ತಪಶ್ವಿನಿಗೆ ಇದು ಸ್ಯಾಂಡಲ್ ವುಡ್ ನಲ್ಲಿ ಮೊದಲ ಚಿತ್ರ. ಚಿತ್ರತಂಡ ಸ್ರ್ಕೀನ್ ಆಡಿಶನ್ ಮಾಡಿ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಇಂದು ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಡಾ ರಾಜ್ ಕುಮಾರ್ ಸಮಾಧಿ ಬಳಿ ಮೊದಲ ಶಾಟ್ ಚಿತ್ರೀಕರಣವಾಗಲಿದೆ. ನಂತರ ಚಿತ್ರತಂಡ ಮೈಸೂರಿಗೆ ತೆರಳಿ ಅಲ್ಲಿ ಬಹುತೇಕ ಚಿತ್ರೀಕರಣವಾಗಲಿದೆ. ಸಂದೇಶ್ ಪ್ರೊಡಕ್ಷನ್ ನಡಿ ರಿಶಬ್ ಶೆಟ್ಟಿ ಫಿಲ್ಮ್ಸ್ ಚಿತ್ರವನ್ನು ಕಾರ್ಯರೂಪಕ್ಕೆ ತರಲಿದೆ.

ರಿಫಿಲ್ ಎಂಬ ಕಿರುಚಿತ್ರದಲ್ಲಿ, ಲವ್ ಇನ್ ಮಂಡ್ಯ, ಎದೆಗಾರಿಕೆ, ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ಪಾತ್ರಗಳನ್ನು ಮಾಡಿದ್ದ ಗಿರಿ ಕೃಷ್ಣ ಹರಿಕಥೆ ಅಲ್ಲ ಗಿರಿ ಕಥೆ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಿಶಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರವಿದು. ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಸ್ವತಂತ್ರ ಚಿತ್ರ ನಿರ್ದೇಶಕನ ಪಾತ್ರ ಮಾಡುತ್ತಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತ, ರಂಗನಾಥ್ ಛಾಯಾಗ್ರಹಣವಿದೆ.

ರಿಶಬ್ ಶೆಟ್ಟಿ ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಭರತ್ ರಾಜ್ ನಿರ್ದೇಶನದ ಚಿತ್ರವಿದು. ಮತ್ತೊಂದು ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರವನ್ನು ಕೂಡ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರಕಥೆ ಬರೆದಿದ್ದು ರಿಶಬ್ ಶೆಟ್ಟಿಯವರೇ. ನಂತರ ರಿಶಬ್ ಅವರ ನಿರ್ದೇಶನದ ರುದ್ರಪ್ರಯಾಗ್ ಚಿತ್ರ ಕೂಡ ತಯಾರಾಗುತ್ತಿದೆ. ಇದರಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದ್ದು 2021ಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT