ಸಿನಿಮಾ ಸುದ್ದಿ

'ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ?' ದುನಿಯಾ ವಿಜಯ್ ಕೇಳಿದ ಪ್ರಶ್ನೆಗೆ ಜಗ್ಗೇಶ್ ಏನಂದ್ರು ಗೊತ್ತಾ?

Raghavendra Adiga

ಸ್ಯಾಂಡಲ್ ವುಡ್ ನಲ್ಲಿ ದಿನದಿನವೂ ಡ್ರಗ್ಸ್ ದಂಧೆಯ ಸುಳಿ ಹಬ್ಬುತ್ತಿರುವ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಹಾಗೂ ನಟ ದುನಿಯಾ ವಿಜಿ ನಡುವಿನ ಸಂಭಾಷಣೆಯೊಂದು ಸಾಕಷ್ಟು ಚಿಂತನೆಗೆ ಕಾರಣವಾಗಿದೆ. "ಅಣ್ಣ ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ?" ಎಂದು ವಿಜಯ್ ಜಗ್ಗೇಶ್ ಅವರನ್ನು ಪ್ರಶ್ನಿಸಿದ್ದು ಇದಕ್ಕೆ ಜಗ್ಗೇಶ್ ನೀಡಿರುವ ಉತ್ತರದ ಬಗ್ಗೆ ಜಗ್ಗೇಶ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.

ಜಗ್ಗೇಶ್ ಸಾಮಾಜಿಕ ತಾಣ ಇನ್ಸ್ಟಾಗ್ರಾಂ ನಲ್ಲಿ ಬರೆದ ಪೋಸ್ಟ್ ನ ಸಂಪೂರ್ಣ ವಿವರ ಹೀಗಿದೆ-

"#ದುನಿಯವಿಜಿ ಕರೆಮಾಡಿ ಅಣ್ಣ ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ? ಎಂದು ದುಃಖದಿಂದ ಕೇಳಿಬಿಟ್ಟ!ನಾನು ಯಾಕೆ ಈ ಪ್ರಶ್ನೆ ಎಂದು ಕೇಳಿದೆ!ಅದಕ್ಕೆ ಅವನು ಹೇಳಿದ್ದು!! ನೋಡಿ ಅಣ್ಣ ನಾವು ಎಷ್ಟೇ ಶ್ರಮಪಟ್ಟು ಜೀವನ ಕಟ್ಟಿಕೊಂಡರು

ಸಮಾಜ ಚರ್ಮದ ಬಣ್ಣದಿಂದ ನಮ್ಮನ್ನು ಅಳೆಯುತ್ತಾರೆ! ನಾವು ನೂರು ಶ್ರೇಷ್ಠ ಸಾಧನೆಮಾಡಿ ಸಣ್ಣತಪ್ಪು ಅರಿಯದಂತೆ ನಮ್ಮಿಂದ ಆಗಿಬಿಟ್ಟರೆ ನಮ್ಮ ಸಾಧನೆ ಶೂನ್ಯಮಾಡಿ ಹಂಗಿಸಿಬಿಡುತ್ತಾರೆ! ಅದೆ ಬಿಳಿ ಚರ್ಮದ ಮನುಜರು ಆಂತರ್ಯವೆಲ್ಲಾ ಕೊಳೆತು ಸಾಧನೆ ಶೂನ್ಯವಾದರು ಅವರ ಬಿಳಿಬಣ್ಣಕ್ಕೆ ಸಮಾಜ ಅವರನ್ನ ನಂಬಿ ಬಿಡುತ್ತಾರೆ ಎಂದ! ನಾನು ಅದಕ್ಕೆ ಉದಾಹರಣೆ ಎಂದು ಕೇಳಿದಾಗ ಡ್ರಗ್ಸ್ ದಂದೆಯಲ್ಲಿನ ಮಹಾಮಹಿಮರ ಹೆಸರು ಹೇಳಿದ! ಉತ್ತರವಿಲ್ಲದೆ ಕ್ಷಣಕಾಲ ಮೌನವಾಗಿ ನನ್ನ ಮೈಚರ್ಮ ನೋಡಿಕೊಂಡೆ ಕಾರಣ ನಾನು ವಿಜಿಗಿಂತ ಕಪ್ಪು!

ಅದಕ್ಕೆ ನಾನು ವಿಜಿಗೆ ಇದ್ದ ಅನುಮಾನ ದುಃಖ ದೂರಮಾಡಲು ಈ ಉದಾಹರಣೆ ಹೇಳಿದೆ...ನೋಡು ವಿಜಿ ನಾವು ಹುಟ್ಟಿದ್ದು ಮದ್ಯಮವರ್ಗದ ಗ್ರಾಮೀಣಬಾಗದ ಬಡಕುಟುಂಬದ ತಂದೆತಾಯಿ ಉದರದಲ್ಲಿ.! ಅನ್ನಕ್ಕೆ ಕೂಲಿಮಾಡಿ ತಿನ್ನುವ ದೇಹ ಪರಿಸರದಲ್ಲಿ ಬೆಂದು ಕೃಷ್ಣವರ್ಣವಾಗಿರುತ್ತದೆ ಅಂತ ಉದರದಲ್ಲಿ ಕಪ್ಪಾಗಿ ಹುಟ್ಟುವುದು ನಮ್ಮ ಜನ್ಮಾಂತರ ಪುಣ್ಯ! ಜಗಕ್ಕೆಗುರು ಕೃಷ್ಣ ಕಪ್ಪು! ಶತೃಸಂಹಾರಕ ಭೈರವ ಕಪ್ಪು! ಲಯಕಾರಕ ಶಿವ ಕಪ್ಪು!ಕಾಳಿಮಾತೆ ಕಪ್ಪು! ದೇಹಕಪ್ಪಾಗಿದ್ದರು ಪರವಾಗಿಲ್ಲಾ ಆದರೆ ಹೃದಯ ಕಪ್ಪಾಗಿ ಇರಬಾರದು! ಬಿಳಿಚರ್ಮಕ್ಕೆ ofcourse ಜನ ಮರುಳಾಗೋದು 100% ಸತ್ಯ! ಗುಣವಂತಹೆಣ್ಣು ಕಪ್ಪಗಿದ್ದರೆ ಮೂಗುಮುರಿದು ಬಿಳಿಹೆಣ್ಣ ಬೇಗ ಒಪ್ಪಿ ಮದುವೆ ಆಗಿ ನಂತರ ಜೀವನ ಪೂರ ಬಾಯಿಬಡಿದುಕೊಂಡು ಬಾಳುವವರ ಉದಾಹರಣೆಯಾಗಿ ಬಹಳ ಮಂದಿ ನೋಡಿದ್ದೇವೆ! ವಿಶೇಷವಾಗಿ ನಮ್ಮ ಕಲಾರಂಗದಲ್ಲಿ ಚರ್ಮಬಿಳಿ ಇದ್ದರಂತು ಅವರ ಮೇಲೆ ದೇವತೆ ರಂಬೆ ಕೊಂಬೆ ಕೆರೆಕಟ್ಟೆ ಎಂದು ಹಾಡು ಬರೆದು ಮೆರೆಸುತ್ತಾರೆ! ಜಾಲತಾಣವೆಲ್ಲಾ ಅಂತ ಬಿಳಿಸುಂದರಿಯೇ ಆವರಿಸಿ ಹಾರಾಡುತ್ತಾರೆ! ಎಷ್ಟೋ ಪ್ರತಿಭೆ ಕಪ್ಪು ಇದ್ದರೆ ಅವಕಾಶ ವಂಚಿತರಾಗುತ್ತಾರೆ.! ಅದು ಅವರವರ ಅದೃಷ್ಟ! ಎಂದು ಸಮಾಧಾನ ಹೇಳಿದೆ! ಅವನು ದೂರವಾಣಿ ಇಟ್ಟಮೇಲೆ ತಲೆಯಲ್ಲಿ ಕಪ್ಪು ಎನ್ನುವ ಹುಳ ಆವರಿಸಿತು!

ಮೈಬಣ್ಣ ಕಪ್ಪಗಿದ್ದರು ಪರವಾಗಿಲ್ಲಾ ಚಿಂತನೆ ಅಪರಂಜಿಯಂತೆ ಇರಲಿ..!! ನಾವು ಶವವಾಗಿ ಸುಟ್ಟಾಗ ಕಪ್ಪುಬಿಳಿ ಬೇದವಿಲ್ಲದೆ ದೇಹ ಬೂದಿಯಾಗುತ್ತದೆ.. ಶುಭರಾತ್ರಿ..ಸವಿಗನಸು.... #ದುನಿಯವಿಜಿ..."

SCROLL FOR NEXT