ಸಿನಿಮಾ ಸುದ್ದಿ

'ಇಂದು ನಿಮ್ಮ ಯಶ್ ಏನೇ ಆಗಿರಬಹುದು, ಅದಕ್ಕೂ ಮೊದಲು ನಾನು ಪ್ರಾಮಾಣಿಕ ಚಾಲಕನ ಪುತ್ರ': ನಟ ಯಶ್

Sumana Upadhyaya

ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಾಜಿ ಬಸ್ ಕಂಡಕ್ಟರ್ ಮಗನಾಗಿರುವ ಚಿತ್ರನಟ ಯಶ್ ಬೆಂಬಲ ನೀಡಬೇಕೆಂದು ನಿನ್ನೆ ನೌಕರರು ಮನವಿ ಮಾಡಿಕೊಂಡಿದ್ದರು. 

 ಅದಕ್ಕೆ ಇಂದು ಟ್ವೀಟ್ ಮೂಲಕ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಿಮ್ಮ ಯಶ್ ಏನೇ ಆಗಿರಬಹುದು, ಆದರೆ ಅವೆಲ್ಲಕ್ಕಿಂತಲೂ ಮೊದಲು ನಾನು ಸಾರಿಗೆ ಸಂಸ್ಥೆಯ ಪ್ರಾಮಾಣಿಕ ಚಾಲಕನ ಮಗ. ಸಾರಿಗೆ ಇಲಾಖೆ ನೌಕರರ ಕಷ್ಟದ ಬಗ್ಗೆ ನನಗೆ ಅರಿವಿದೆ, ನನ್ನ ತಂದೆ ಕಷ್ಟಪಟ್ಟ ದಿನಗಳು ನೆನಪಿಗೆ ಬರುತ್ತವೆ. ಬಸ್ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ-ಸಹಕಾರ ಲೆಕ್ಕವಿಲ್ಲದಷ್ಟು, ಸಾರಿಗೆ ನೌಕರರು ಇಂದು ಪ್ರಾಮಾಣಿಕವಾಗಿ ನ್ಯಾಯ ಕೊಡಿ ಎಂದು ಹೋರಾಟಕ್ಕಿಳಿದಿದ್ದು ನನ್ನನ್ನು ಬಹಳವಾಗಿ ಕಾಡುತ್ತಿದೆ ಎಂದಿದ್ದಾರೆ.

ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಮಾತನಾಡಿ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ಈಡೇರಿಸುವ ಮಾತನ್ನು ಕೊಟ್ಟಿದ್ದಾರೆ. ಸಮಸ್ಯೆಗೆ ಮುಕ್ತವಾಗಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

SCROLL FOR NEXT