ಸತ್ಯಮಂಗಳ ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ 'ಸತ್ಯಮಂಗಳ' ಸಿನಿಮಾಗೆ ಲೋಹಿತ್ ನಿರ್ದೇಶನ

ಶಿವರಾಜ್​ ಕುಮಾರ್​ ನಟನೆಯ ಮತ್ತೊಂದು ಹೊಸ ಸಿನಿಮಾ ಅನೌನ್ಸ್​ ಆಗಿದೆ. ಯುವ ನಿರ್ದೇಶಕ ಲೋಹಿತ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದು ‘ಸತ್ಯಮಂಗಳ’ ಎಂಬ ಇಂಟರೆಸ್ಟಿಂಗ್​ ಶೀರ್ಷಿಕೆ ಇಡಲಾಗಿದೆ.

ಶಿವರಾಜ್​ ಕುಮಾರ್​ ನಟನೆಯ ಮತ್ತೊಂದು ಹೊಸ ಸಿನಿಮಾ ಅನೌನ್ಸ್​ ಆಗಿದೆ. ಯುವ ನಿರ್ದೇಶಕ ಲೋಹಿತ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದು ‘ಸತ್ಯಮಂಗಳ’ ಎಂಬ ಇಂಟರೆಸ್ಟಿಂಗ್​ ಶೀರ್ಷಿಕೆ ಇಡಲಾಗಿದೆ.

ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಘೋಷಣೆ ಆಗಿರುವುದು ಫ್ಯಾನ್ಸ್​ಗೆ ಖುಷಿ ನೀಡಿದೆ. ಟೈಟಲ್​ ಅನೌನ್ಸ್​ ಮಾಡುವುದರ ಜೊತೆಗೆ ಪೋಸ್ಟರ್​ ಕೂಡ ಬಿಡುಗಡೆ. ಕಾಡಿನ ಹಿನ್ನೆಲೆಯಲ್ಲಿ, ಗಾಂಭೀರ್ಯದಿಂದ ನಡೆದುಬರುತ್ತಿರುವ ಕರಿಚಿರತೆಯ ಖಡಕ್​ ಲುಕ್​ ಈ ಪೋಸ್ಟರ್​ನಲ್ಲಿ ಹೈಲೈಟ್​ ಆಗಿದೆ.

ಕೃಷ್ಣ ಸಾರ್ಥಕ್​, ಶಿವರಾಜ್​ ಕುಮಾರ್​, ಲೋಹಿತ್

ಈ ಹಿಂದೆ ‘ಮಮ್ಮಿ’ ಮತ್ತು ‘ದೇವಕಿ’ ಸಿನಿಮಾಗಳನ್ನು ಮಾಡಿ ಗುರುತಿಸಿಕೊಂಡವರು ನಿರ್ದೇಶಕ ಲೋಹಿತ್​. ಈಗ ಅವರಿಗೆ ಶಿವರಾಜ್​ಕುಮಾರ್​ ಅವರಂಥ ಹಿರಿಯ ಸ್ಟಾರ್​ ಹೀರೋ ಜೊತೆ ಸಿನಿಮಾ ಮಾಡುವ ಚಾನ್ಸ್​ ಸಿಕ್ಕಿದೆ. ಲೋಹಿತ್​ ಹೇಳಿದ ಕಥೆ ಕೇಳಿ ಇಷ್ಟಪಟ್ಟಿರುವ ‘ಹ್ಯಾಟ್ರಿಕ್​ ಹೀರೋ’ ಶಿವಣ್ಣ ಈ ಸಿನಿಮಾಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ತಮ್ಮ ಮೊದಲೆರಡು ಸಿನಿಮಾಗಳಲ್ಲಿ ನಾಯಕಿಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿದ್ದ ಲೋಹಿತ್​ ಅವರು ಮೂರನೇ ಸಿನಿಮಾದಲ್ಲಿ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ ‘ಬೈರಾಗಿ’ಯ ಕೆಲಸಗಳು ಚುರುಕಿನಿಂದ ಸಾಗುತ್ತಿವೆ. ಆ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕೃಷ್ಣ ಸಾರ್ಥಕ್​ ಅವರೇ ‘ಸತ್ಯಮಂಗಳ’ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರ ಅನೌನ್ಸ್​ ಆಗಿದ್ದು, 2022ರಲ್ಲಿ ಸೆಟ್ಟೇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT