ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಪೊಲೀಸರ ಕೈ ಸೇರಿದ ಎಫ್ ಎಸ್ ಎಲ್ ವರದಿಯಲ್ಲಿ 'ಪಾಸಿಟಿವ್ ರಿಪೋರ್ಟ್'!

ಸ್ಯಾಂಡಲ್ ವುಡ್ ನಟಿಮಣಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೊಸ ಟ್ವಿಸ್ಟ್ ದೊರೆತಿದ್ದು, ನಟಿಯರು ಮಾದಕ ವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ ಎಂಬ ಅಂಶ ಎಫ್ ಎಸ್ ಎಲ್ ವರದಿಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟಿಮಣಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೊಸ ಟ್ವಿಸ್ಟ್ ದೊರೆತಿದ್ದು, ನಟಿಯರು ಮಾದಕ ವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ ಎಂಬ ಅಂಶ ಎಫ್ ಎಸ್ ಎಲ್ ವರದಿಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಬರೊಬ್ಬರಿ 10 ತಿಂಗಳ ಬಳಿಕ ಈ ವರದಿ ಸಿಸಿಬಿ ಪೊಲೀಸ್ ಕೈ ಸೇರಿದೆ.  ಹೈದರಾಬಾದ್ ಎಫ್ ಎಫ್ ಎಲ್ ಲ್ಯಾಬ್ ನಿಂದ ಬಂದ ವರದಿಯಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಅವರ ಸಹಚರರಾದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು FSL ಪರೀಕ್ಷೆಯಲ್ಲಿ ದೃಡಪಟ್ಟಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ FSLಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ಸದರಿ ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ ಎನ್ನಲಾಗಿದೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ
ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಮಾತ್ರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದರೆ ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳ ತಡವಾಗಿ ಬಂಧನವಾಗುತ್ತದೆ. ಇಂತಹ ಪರಿಸ್ಥಿತಿಯತ್ತಿ ವರದಿ ನೆಗೆಟಿಲ್ ಬಂದು ಅವರು ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ CFSLಗೆ ಟೆಸ್ಟ್​ಗಾಗಿ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.

ಕೋರ್ಟ್ ಗೆ ವರದಿ ಸಲ್ಲಿಕೆ
ಇನ್ನು ಸಿಸಿಬಿ ಅಧಿಕಾರಿಗಳು ಕಲೆಹಾಕಿರುವ ಎಫ್ಎಸ್ಎಲ್ ವರದಿಯನ್ನು ತನಿಖಾಧಿಕಾರಿ ಪುನೀತ್ ಅವರು, 33ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದೆ.

ಏನಿದು ಪ್ರಕರಣ:
2020ರ ಸೆಪ್ಟೆಂಬರ್ 14ನೇ ತಾರೀಖಿನಂದು ನಟಿ ರಾಗಿಣಿ ದ್ವಿವೇದಿ ಇದೇ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ  ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು. 2020ರ ಸೆಪ್ಟೆಂಬರ್ 16ರಂದು ಜೈಲು ಸೇರಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT