ಮಾನ್ವಿತಾ ಕಾಮತ್ 
ಸಿನಿಮಾ ಸುದ್ದಿ

ಪಿಸಿ ಶೇಖರ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಮಾನ್ವಿತಾ ಕಾಮತ್ ನಾಯಕಿ

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್ ಅವರು ಹೊಸ ಪ್ರಾಜೆಕ್ಟ್ ವೊಂದನ್ನು ಕೆಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್ ಅವರು ಹೊಸ ಪ್ರಾಜೆಕ್ಟ್ ವೊಂದನ್ನು ಕೆಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇದರಂತೆ ಕೊರೋನಾ ಲಾಕ್‌ಡೌನ್‌ನಿಂದ ಬಹಳ ಸೈಲೆಂಟ್ ಆಗಿದ್ದ ನಟಿ ಮಾನ್ವಿತಾ ಕಾಮತ್ ಅವರು, ಇದೀಗ ಪಿಸಿ ಶೇಖರ್ ಅವರ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ.

ಉತ್ತಮ ಅಭಿನಯದ ಸಾಮರ್ಥ್ಯ, ಅನುಭವ ಇರುವ ನಟಿಗಾಗಿ ಹುಡುಕಾಡುತ್ತಿದ್ದೆ. ಬಳಿಕ ಮಾನ್ವಿತಾ ಅವರೇ ಸೂಕ್ತ ಎನಿಸಿತು ಎಂದು ನಿರ್ದೇಶಕ ಶೇಖರ್ ಅವರು ಹೇಳಿದ್ದಾರೆ. 

ಈ ಚಿತ್ರದ ಮೂಲಕ ಮತ್ತೆ ಅರ್ಜುನ್ ಜನ್ಯ ಅವರು ಶೇಖರ್ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ. ಪಿಸಿ ಶೇಖರ್ ಅವರ ಈ ಹಿಂದಿನ ಎಲ್ಲಾ ಚಿತ್ರಗಳಿಗೂ ಜನ್ಯ ಸಂಗೀತ ನೀಡಿದ್ದರು. ಇನ್ನು ಶಕ್ತಿ ಶೇಖರ್ ಛಾಯಾಗ್ರಾಹಕಾರಗಿ ಕೆಲಸ ಮಾಡುತ್ತಿದ್ದು, ಸಚಿನ್ ಜಗದೀಶ್ವರ್ ಎಸ್‌ಬಿ ಸಂಭಾಷಣೆ ನೀಡುತ್ತಿದ್ದಾರೆ. ಕಲಾ ವಿಭಾಗದಲ್ಲಿ ರಾಜಶೇಖರ ಕೆಲಸ ಮಾಡಲಿದ್ದಾರೆ. ಸಚಿನ್ ಜಗದೀಶ್ವರ್ ಈ ಹಿಂದೆ 'ರಾಗ' ಮತ್ತು 'ದಿ ಟೆರರಿಸ್ಟ್' ಅಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

ಚಿತ್ರಕ್ಕೆ ಸದ್ಯ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರು ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಹೊಂದಿದ್ದಾರೆ. ಇನ್ನುಳಿದಂತೆ ನಾಯಕನಟ ಹಾಗೂ ಪೋಷಕ ಕಲಾವಿದರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸದ್ಯದಲ್ಲೇ ಈ ಪಾತ್ರಗಳನ್ನು ಸಹ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಮಾನ್ವಿತಾ ಅವರ ಶಿವ 143 ಮತ್ತು ಕನ್ನಡ-ಮರಾಠಿ ದ್ವಿಭಾಷಾ ಚಿತ್ರವಾದ ರಾಜಸ್ಥಾನ ಡೈರೀಸ್‌ ಚಿತ್ರಗಳು ಬಿಡುಗಡೆಗೆ ತುಂದಿಗಾಲಲ್ಲಿ ನಿಂತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT